Breaking News

ಸುಳ್ಯ ರೋಟರಿ ಸಂಸ್ಥೆಯಿಂದ ರೂ.16 ಲಕ್ಷ ವೆಚ್ಚದಲ್ಲಿ ಜಯನಗರ ಸ್ಮಶಾನ ಅಭಿವೃದ್ಧಿ : ಜೂ.22ರಂದು ನ. ಪಂ.ಗೆ ಹಸ್ತಾಂತರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ವಿಶಾಲವಾದ ಛಾವಣಿ, ಹುಲಿಯ ಮೇಲೆ ಕುಳಿತ ಶಿವನ ಮೂರ್ತಿ ಸಹಿತ ಇನ್ನಿತರ ಅಭಿವೃದ್ಧಿ

ಸುಳ್ಯ ರೋಟರಿ ಕ್ಲಬ್ ೨೦೨೧- ೨೨ರ ಅವಧಿಯ ಜಿಲ್ಲಾ ಯೋಜನೆಯಂತೆ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಜಯನಗರದಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಯನ್ನು ರೂ.೧೫ ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದು, ಅದನ್ನು ನ.ಪಂ. ಗೆ ಜೂ.೨೨ರಂದು ಹಸ್ತಾಂತರ ಮಾಡಲಾಗುವುದು ಎಂದು ರೋಟರಿ ಕ್ಲಬ್ ಅಧ್ಯಕ್ಷ ಪ್ರಭಾಕರ್ ನಾಯರ್ ಹಾಗೂ ಚೇರ್‌ಮೆನ್ ಕಸ್ತೂರಿ ಶಂಕರ್ ಹೇಳಿದ್ದಾರೆ.

ಜೂ.೧೮ರಂದು ಜಯನಗರದ ಸ್ಮಶಾನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಅಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಿದರು. “ರೋಟರಿ ಕ್ಲಬ್ ಯೋಜನೆಯಲ್ಲಿ ಜಯನಗರ ಸ್ಮಶಾನವನ್ನು ಅಭಿವೃದ್ಧಿ ಪಡಿಸಲು ನಿರ್ಧರಿಸಿದ್ದೆವು. ಅದರಂತೆ ನ.ಪಂ. ನವರ ಜತೆ ಮಾತನಾಡಿ ಬಳಿಕ ಕೆಲಸ ಆರಂಭಿಸಿದೆವು. ಆರಂಭದಲ್ಲಿ ಯಾವುದೇ ವ್ಯವಸ್ಥೆಗಳು ಇಲ್ಲಿ ಇರಲಿಲ್ಲ. ಶವ ಸುಡುವ ಸಂದರ್ಭ ಮಳೆ ಬಂದರೆ ನೀರು ಒಳ ಬರುವಂತಿತ್ತು. ಇದೀಗ ಶವ ಸುಡುವಲ್ಲಿ ವಿಸ್ತಾರವಾದ ಮೇಲ್ಛಾವಣಿ ಮಾಡಲಾಗಿದೆ. ಸ್ಮಶಾನ ರೂಪುಗೊಳ್ಳುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಒಂದು ಸಿಲಿಕಾನ್ ಛೇಂಬರನ್ನು ಉಚಿತವಾಗಿ ನೀಡಿರುವುದಲ್ಲದೆ, ರೋಟರಿ ಸದಸ್ಯರು ಹಾಗೂ ಊರಿನ ದಾನಿಗಳು ಕೈ ಜೋಡಿಸಿದ್ದಾರೆ.


ಈ ಅಭಿವೃದ್ಧಿ ಯೋಜನೆಯಲ್ಲಿ ಶಿಥಿಲಗೊಂಡಿದ್ದ ಸ್ಮಶಾನದ ಛಾವಣಿಯನ್ನು ನೂತನವಾಗಿ ನಿರ್ಮಿಸಲಾಗಿರುವುದರ ಜತೆಗೆ ಸ್ಮಶಾನದ ಶೋಭೆಯನ್ನು ಹೆಚ್ಚಿಸಲು ಸುಮಾರು ೧೫ ಫೀಟ್ ಉದ್ದದ ಶಿವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶವ ಸಂಸ್ಕಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ಅನುಕೂಲವಾಗುವಂತೆ ಒಂದು ತಂಗುದಾನವನ್ನು ನಿರ್ಮಿಸಿzವೆ. ಶೌಚಾಲಯ ಹಾಗೂ ಸ್ನಾನದ ಕೊಠಡಿಯೂ ಇಲ್ಲಿದೆ ಎಂದು ಹೇಳಿದರು. ಇನ್ನೂ ಸ್ಮಶಾನದ ಮುಂಭಾಗದಲ್ಲಿ ಇಂಟರ್‌ಲಾಕ್ ಸಹಿತ ಇನ್ನಿತರ ಕೆಲಸ ಕಾರ್ಯಗಳು ಆಗಲಿದೆ ಎಂದು ಹೇಳಿದರು.

ಮೇಲುಸ್ತುವಾರಿ ಜವಾಬ್ದಾರಿ
ಸ್ಮಶಾನವನ್ನು ನೋಡಿಕೊಳ್ಳಲು ಮೆಲುಸ್ತುವಾರಿ ಸಮಿತಿಯನ್ನು ರಚಿಸಲಾಗಿದ್ದು ಅವರೇ ಇದರ ಜವಾಬ್ದಾರಿ ನೋಡಿಕೊಳ್ಳಲಿದ್ದಾರೆ. ರೋಟರಿ ಸದಸ್ಯರು, ನ.ಪಂ. ಅಧ್ಯಕ್ಷರು ಹಾಗೂ ಇಲ್ಲಿಯ ಸದಸ್ಯರು, ಊರವರು ಸೇರಿ ಮೇಲುಸ್ತುವಾರಿ ಸಮಿತಿ ಮಾಡಿಕೊಳ್ಳಲಾಗಿದ್ದು ಅವರು ಇದರ ಜವಾಬ್ದಾರಿ ನೋಡಿಕೊಳ್ಳುವರು. ಇಲ್ಲಿ ಒಬ್ಬ ಕಾವಲುಗಾರನನ್ನು ನೇಮಿಸಲಾಗುವುದು. ಶವ ಸುಡಲು ಸುಮಾರು ರೂ.೩ ಸಾವಿರ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದ್ದು, ಅದನ್ನು ಶವ ತರುವವರಿಂದ ಪಡೆಯಲಾಗುವುದು. ಕಟ್ಟಿಗೆ ಹಾಗೂ ಸ್ಮಶಾನ ಅಭಿವೃದ್ಧಿಗೆ ಆ ಹಣವನ್ನು ಬಳಸಲಾಗುವುದು ಎಂದು ಹೇಳಿದ ಅವರು ಈ ಕುರಿತು ಸ್ಮಶಾನ ಹಸ್ತಾಂತರದ ಬಳಿಕ ಸ್ಪಷ್ಟ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜೂ.೨೨ರಂದು ಕಾರ್ಯಕ್ರಮ
ಜೂ.೨೨ರಂದು ಅಪರಾಹ್ನ ೩ ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಸಚಿವ ಎಸ್.ಅಂಗಾರ, ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಯೋಜಿತ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಇನ್ನಿತರ ಗಣ್ಯರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಆನಂದ ಖಂಡಿಗ, ಸದಸ್ಯ ಜೆ.ಕೆ.ರೈ ಇದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.