ಸೀತಾರಾಮರೈ ಸವಣೂರುರವರ 75ನೇ ಹುಟ್ಟುಹಬ್ಬವನ್ನು ಸುಳ್ಯದ ವಿಶೇಷ ಮಕ್ಕಳ ಶಾಲೆ ಸಾಂದೀಪನಿ ಇಲ್ಲಿಯ ಶಾಲಾ ಮಕ್ಕಳ ಜೊತೆಯಲ್ಲಿ ಆಚರಿಸಿದ ಸವಿನೆನಪಿಗಾಗಿ ಸೀತಾರಾಮ ರೈ ಸವಣೂರು ಇವರು ಸಾಂದೀಪ್ ವಿಶೇಷ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲು ರೂ.25,000 ಧನಸಹಾಯ ನೀಡಿದರು.
ಧನಸಹಾಯದ ಚೆಕ್ನ್ನು ಆದರ್ಶ ವಿವಿದೊದ್ದೇಶ ಸಹಕಾರಿ ಸಂಘದ ಸುಳ್ಯ ಶಾಖೆಯ ಮ್ಯಾನೇಜರ್ ಮನೋಜ್ ಕೆ.ಎನ್. ಮತ್ತು ಶಾರಾದಾಂಬಾ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಗೋಕುಲ್ ದಾಸ್ ಇವರು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಹರಿಣಿ ಸದಾಶಿವರಿಗೆ ಹಸ್ತಾಂತರಿಸಿದರು.