2021-22 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಸರಕಾರಿ ಪದವಿ ಪೂರ್ವ ಕಾಲೇಜು ಗಾಂಧಿನಗರ ಇದರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಿಂದ ಒಟ್ಟು 43 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 37 ವಿದ್ಯಾರ್ಥಿಗಳು ಉತ್ತೀರ್ಣರಾಗಿ 86% ಪಡೆದುಕೊಂಡಿದೆ.
ಇದರಲ್ಲಿ ಕಲಾವಿಭಾಗದಲ್ಲಿ ಶೇಕಡ 88, ವಾಣಿಜ್ಯ ವಿಭಾಗದಲ್ಲಿ ಶೇಕಡ 94, ವಿಜ್ಞಾನದಲ್ಲಿ ಶೇಕಡ 70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾವಿಭಾಗದಲ್ಲಿ ಆಯಿಸತ್ ತಂಸೀನಾ 416 ಅಂಕ ಪಡೆದು ಪ್ರಥಮ ವಾದರೆ, ವಾಣಿಜ್ಯ ವಿಭಾಗದಲ್ಲಿ ಸೌದಾನ 546 ಅಂಕ ಪಡೆದು ಪ್ರಥಮ ಸ್ಥಾನ, ವಿಜ್ಞಾನ ವಿಭಾಗದಲ್ಲಿ ಕೃತಿಕಾ 497 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.