ಪಂಜ: ಕುದ್ವದಿಂದ ಗೋಳಿಕಟ್ಟೆ ತನಕ ರಸ್ತೆ ಕಾಂಕ್ರೀಟಿಕರಣ ಪೂರ್ಣ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕೂತ್ಕುಂಜ ಗ್ರಾಮದ ಕುದ್ವದಿಂದ ಪಂಬೆತ್ತಾಡಿ ಗ್ರಾಮದ ಗೋಳಿಕಟ್ಟೆ ತನಕ 2.6 ಕಿ.ಮೀ ರಸ್ತೆ ಕಾಂಕ್ರೀಟಿಕರಣ  ಪೂರ್ಣಗೊಂಡು ವಾಹನ ಸಂಚಾರ ಆರಂಭ ಗೊಂಡಿದೆ.

ಕರ್ನಾಟಕ ರಾಜ್ಯ ಸರಕಾರದಿಂದ 1.5 ಕೋಟಿ ರೂ.ಅನುದಾನವನ್ನು ಲೋಕೋಪಯೋಗಿ ಸಚಿವರಾದ ಸಿ.ಸಿ ಪಾಟೀಲ್ , ಸಚಿವರು ಮತ್ತು ಶಾಸಕರಾದ ಎಸ್ ಅಂಗಾರ ರವರ ಶಿಫಾರಸಿನ ಮೇರೆಗೆ ಮಂಜೂರು ಗೊಳಿಸಿದ್ದರು. ಲೋಕೋಪಯೋಗಿ ಸಚಿವರ ಕಾರ್ಯದರ್ಶಿ ಕೆ.ಸಿ ವಿರೂಪಾಕ್ಷ ಸಹಕರಿಸಿದ್ದರು. ಪಂಜ ಗ್ರಾಮ ಪಂಚಾಯತ್ , ಕಲ್ಮಡ್ಕ ಗ್ರಾಮ ಪಂಚಾಯತ್, ಜನಪ್ರತಿನಿಧಿಗಳು,ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯ, ಸುಳ್ಯ ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮಸ್ಥರ ಸಂಪೂರ್ಣ ಸಹಕಾರದೊಂದಿಗೆ ಕಾಮಗಾರಿ ಅತೀ ಶೀಘ್ರವಾಗಿ ಪೂರ್ಣಗೊಂಡಿದೆ. ಈ ರಸ್ತೆ ಕುದ್ವದಿಂದ ನಾಗತೀರ್ಥ, ಡಬಲ್ ಕಟ್ಟೆ, ಮಂಚಿಕಟ್ಟೆ, ಪಂಜದಬೈಲು,ಗೋಳಿಕಟ್ಟೆ ಮೊದಲಾದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಈ ಪ್ರದೇಶದ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಕಾಮಗಾರಿ ಉತ್ತಮ ಗುಣಮಟ್ಟದಿಂದ ಕೂಡಿದ್ದು,ಅತ್ಯಂತ ಶೀಘ್ರವಾಗಿ ಪೂರ್ಣ ಗೊಂಡಿದೆ ಎಂದು ರಸ್ತೆಯ ಪಲಾನುಭಾವಿಗಳು ಸಂತಸ ವ್ಯಕ್ತಪಡಿಸಿದ್ದಾರೆ.ಇದೇ ರಸ್ತೆ ಪಂಬೆತ್ತಾಡಿ ಮುಖ್ಯ ರಸ್ತೆಗೆ ಸಂಪರ್ಕವಿರುವುದರಿಂದ ಈ ಪ್ರದೇಶದ ಜನರು ಸರ್ವ ಋತುವಿನಲ್ಲೂ ಸಂಚಾರಕ್ಕೆ ಅನುಕೂಲವಾದಂತಾಗಿದೆ. ಕಾಮಗಾರಿಗೆ ಅನುದಾನ ತರಿಸುವಲ್ಲಿ ಪಂಜದ ಕುದುಮಾರುಬೆಟ್ಟು
ಡಾ.ಕೆ.ಗೋಪಾಲಕೃಷ್ಣ ಭಟ್ ರವರ ಪುತ್ರ ಬೆಂಗಳೂರಿನಲ್ಲಿ ವೈದ್ಯರಾಗಿರುವ ಡಾ.ಅನಿಲ್ ರವರು ಪ್ರಯತ್ನಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.