ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪುನಃ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಜೂ.16 ರಿಂದ ಜೂ.19 ರ ತನಕ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ
ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭಕ್ತಿ ಸಂಭ್ರಮದಿಂದ ನಡೆಯಿತು.
ಜೂ.19ರಂದು ಮುಂಜಾನೆ ಮಹಾಗಣಪತಿ ಹೋಮ,ನಾಂದೀಪುಣ್ಯಾಹ, ಮುಂಜಾನೆ ಮಿಥುನ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ಜರುಗಿತು.ಇದೇ ವೇಳೆ ಶ್ರೀ ಉಳ್ಳಾಕುಲು ದೈವದ ಬಿಲ್ಲು ಮತ್ತು ಸುರಿಯಗಳಿಗೆ ಬೆಳ್ಳಿಯ ಕವಚ ಅರ್ಪಣೆ ನಡೆಯಿತು.
ಜೂ 16.ರಂದು ಸಂಜೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಬಿಂಬ ಪರಿಗ್ರಹ ,ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಜೂ. 17.ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಬಿಂಬ ಶುದ್ಧಿ, ಕಲಶ ಪೂಜೆ, ಅನುಜ್ಞಾ ಕಲಶ ಪೂಜೆ, ಬಿಂಬ ಶುದ್ಧಿ ಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ಮಹಾಪೂಜೆ ,ಪ್ರಸಾದ ವಿತರಣೆ, ಸಂಜೆ ನೂತನ ಬಿಂಬ ಜಲಾಧಿವಾಸ, ಕುಂಡಶುದ್ಧಿ, ದುರ್ಗಾಪೂಜೆ, ರಾತ್ರಿ,ಮಹಾಪೂಜೆ, ಪ್ರಸಾದ ವಿತರಣೆ ಜರುಗಿತು.
ಜೂ.18.ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಸಂಹಾರ ತತ್ತ್ವ ಹೋಮ, ತತ್ತ್ವ ಕಲಶ ಪೂಜೆ, ಕುಂಭೇಶಕರ್ಕರೀ ಪೂಜೆ, ಶಯ್ಯಾ ಪೂಜೆ, ಪ್ರಾರ್ಥನೆ, ತತ್ತ್ವಕಲಶಾಭಿಷೇಕ, ಧ್ಯಾನಸಂಕೋಚಕ್ರಿಯೆ, ಜೀವಕಲಶಪೂಜೆ, ಜೀವೋದ್ವಾಸನೆ, ಜೀವಕಲಶ, ಶಯ್ಯಾರೋಪಣ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ. ಸಂಜೆ ಬ್ರಹ್ಮಕಲಶ ಪೂಜೆ, ಪರಿ ಕಲಶಪೂಜೆ, ಕಲಶಾಧಿವಾಸ, ಧ್ಯಾನಧಿವಾಸ, ರಾತ್ರಿ ಮಹಾಪೂಜೆ,ಪ್ರಸಾದ ವಿತರಣೆ ಜರುಗಿತು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು, ವ್ಯವಸ್ಥಾಪನಾ ಸಮಿತಿಯ ಪೂರ್ವಾಧ್ಯಕ್ಷ ಡಾ.ರಾಮಯ್ಯ ಭಟ್ , ಮಾಜಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ಕುದ್ವ, ,ಶಂಕರ್ ಕುಮಾರ್ ,ನಾರಾಯಣ ಗೌಡ ಕೋರ್ಜೆ, ದಿನೇಶ್ ಗರಡಿ, ಲಕ್ಷ್ಮಣ ಗೌಡ ಆಕ್ರಿಕಟ್ಟೆ, ರಾಮಚಂದ್ರ ಭಟ್, ಶ್ರೀಮತಿ ಸೌಮ್ಯ ಪಿ ಆರ್, ಶ್ರೀಮತಿ ರೋಹಿಣಿ ಆರ್ನೋಜಿ , ಸಲಹಾ ಸಮಿತಿಯ ಚಂದ್ರಶೇಖರ ಶಾಸ್ತ್ರಿ ಸಿ,ಸದಾನಂದ ರೈ ಅರ್ಗುಡಿ, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.ಪ್ರತಿ ದಿನ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ಜರುಗಿತು.