ಮುಕ್ಕೂರು : ಪೆರುವಾಜೆ ಗ್ರಾಮದ ಕಂರ್ಬುತ್ತೋಡಿ ನಿವಾಸಿ , ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿನಿ ಸೌಪರ್ಣಿಕಾ.ರೈ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.93.5 ರಷ್ಟು ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಅಕೌಂಟೆನ್ಸಿಯಲ್ಲಿ 99 ಅಂಕ, ಕಂಪ್ಯೂಟರ್ ಸೈನ್ಸ್ ನಲ್ಲಿ 94 ಅಂಕ, ಎಕನಾಮಿಕ್ಸ್ ನಲ್ಲಿ 93 ಅಂಕ, ಬ್ಯುಸಿನೆಸ್ ಸ್ಟಡೀಸ್ನಲ್ಲಿ 88 ಅಂಕ ಹಾಗು ಕನ್ನಡದಲ್ಲಿ 97, ಇಂಗ್ಲೀಷ್ ನಲ್ಲಿ 90 ಅಂಕ ಪಡೆದಿದ್ದಾರೆ
ಸೌಪರ್ಣಿಕಾ. ರೈ ಅವರು ಪ್ರೇಮನಾಥ. ರೈ ಮತ್ತು ಜಯಂತಿ. ರೈ ಅವರ ಪುತ್ರಿ