ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕೆ ದಾಖಲಾತಿ ಆರಂಭಗೊಂಡಿದೆ. ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಜೂ.20 ರಿಂದ ಕಾಲೇಜಿನ ಕಛೇರಿಯಿಂದ ಅರ್ಜಿ ಸ್ವೀಕರಿಸಿ ನೀಡಬಹುದಾಗಿದೆ.
ಬಿ ಬಿ ಎ, ಬಿ.ಕಾಂ, ಬಿ ಎ ಕೋರ್ಸ್ ಗಳಿದ್ದು ಬಿ ಎ ಯಲ್ಲಿ ಇಕಾನಾಮಿಕ್ ಮತ್ತು ಪೊಲಿಟಿಕಲ್ ಸೈನ್ಸ್, ಹಿಸ್ಟರಿ ಮತ್ತು ಸಾಮಾಜ ಶಾಸ್ತ್ರ, ಇಂಗ್ಲೀಷ್ ಮತ್ತು ಹಿಸ್ಟರಿ ಎಂಬ ಮೂರು ವಿಭಾಗಳ ಆಯ್ಕೆಗೆ ಅವಕಾಶವಿದೆ. ಇದಲ್ಲದೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಕೇಂದ್ರೀಕೃತ ಶಿಕ್ಷಣ, ಐಸಿಟಿ ಓರಿಯಂಟೆಡ್ ತರಬೇತಿ, ಮೌಲ್ಯ ವರ್ಧಿತ ಕೋರ್ಸ್ ಗಳು, ರಾಷ್ಟ್ರೀಯ, ರಾಜ್ಯ, ವಿಶ್ವವಿದ್ಯಾಲಯ ಮಟ್ಟದ ಸೆಮಿನಾರ್ ಗಳು, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು, ಎನ್ ಎಸ್ ಎಸ್, ಯೂತ್ ರೆಡ್ ಕ್ರಾಸ್, ರೋವರ್ಸ್, ರೇಂಜರ್ಸ್ ಘಟಕದ ಚಟುವಟಿಕೆಗಳಿಗೆ ಅವಕಾಶವಿದೆ.