ಸುಳ್ಯ ಅನ್ಸಾರಿಯ ಎಜುಕೇಷನ್ ಸೆಂಟರ್ ಎಸ್ .ಬಿ. ಎಸ್. ಮಹಾಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಳ್ಯ ಜಟ್ಟಿಪಳ್ಳ ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅನ್ಸಾರಿಯಾ ಅರಬಿಕ್ ಮದ್ರಸ ಸುನ್ನೀ ಬಾಲ ಸಂಘ (SBS) 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಜೂನ್ 19ರಂದು ರಂದು ಮದ್ರಸ ಸಭಾಂಗಣದಲ್ಲಿ ಅಧ್ಯಕ್ಷರಾದ ಮುಹಮ್ಮದ್ ರುಹೈದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಮದ್ರಸ ಅಧ್ಯಾಪಕರಾದ ಸಯ್ಯದ್ ಹುಸೈನ್ ಸಹದಿ ತಂಙಳ್ ರವರು ದುಆ ಮೂಲಕ ಚಾಲನೆ ನೀಡಿದರು. ಸಭೆಯನ್ನು ಮುಖ್ಯೋಪಾಧ್ಯಾಯರಾದ ನೌಶಾದ್ ಮದನಿ ಉದ್ಘಾಟಿಸಿದರು. ವಾರ್ಷಿಕ ವರದಿಯನ್ನು ಪ್ರ. ಕಾರ್ಯದರ್ಶಿ ಮುಹಮ್ಮದ್ ಸುಹೈಲ್ ಮತ್ತು ಲೆಕ್ಕ ಪತ್ರವನ್ನು ಕೋಶಾಧಿಕಾರಿ ಮುಹಮ್ಮದ್ ಮಂಡಿಸಿದರು. ಸಭೆಯಲ್ಲಿ2022-23ನೇ ಸಾಲಿನ ನೂತನ ಸಮಿತಿಯ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ಸುಹೈಲ್ , ಪ್ರಧಾನ ಕಾರ್ಯದರ್ಶಿಯಾಗಿ ಅಲ್ಫಾಝ್ ಕೋಶಾಧಿಕಾರಿಯಾಗಿ ಮುಹಮ್ಮದ್ ರುಹೈದ್ ರವರನ್ನು ಹಾಗೂ ಉಪಾಧ್ಯಕ್ಷರಾಗಿ ಸಿನಾನ್ ಜಿ, ಮುಹಮ್ಮದ್ ಅಝಾದ್ ಮತ್ತು ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಅಲ್ಫಾಝ್ , ಸಾಬಿತ್ ರವರನ್ನು ಆಯ್ಕೆ ಮಾಡಲಾಯಿತು. ಮದ್ರಸ ಮುಖ್ಯ ನಾಯಕನಾಗಿ ಮುದಸ್ಸಿರ್ ರವರನ್ನು ಆಯ್ಕೆ ಮಾಡಲಾಯಿತು‌. ಸಭೆಯಲ್ಲಿ SBS ಸಂಚಾಲಕರಾದ ಅಬ್ದುಲ್ಲಾ ಹಿಮಮಿ ಸಖಾಫಿ ಹಾಗೂ ಅಧ್ಯಾಪಕರಾದ ಸಯ್ಯದ್ ಹುಸೈನ್ ಸಹದಿ, ಹಂಝತುಲ್ ಕರ್ರಾರ್ ಮುಈನಿ ಸಖಾಫಿ ಮಾತನಾಡಿದರು. ಕಾರ್ಯದರ್ಶಿ ಸುಹೈಲ್ ಸ್ವಾಗತಿಸಿ ನೂತನ ಕಾರ್ಯದರ್ಶಿ ಅಲ್ಫಾಝ್ ಧನ್ಯವಾದಗೈದರು‌.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.