Breaking News

ಪ.ಜಾತಿ ಪ. ಪಂಗಡಕ್ಕೆ ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಮಂಜೂರಾದ ಶೌಚಾಲಯ, ಸ್ನಾನಗೃಹ ಕಟ್ಟಡ ಸ್ಥಳ ಬದಲಾವಣೆ ಆರೋಪ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಜೂನ್ 27ರಂದು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆಯ ಎಚ್ಚರಿಕೆ

ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ಮತ್ತು ಸ್ನಾನಗೃಹದ ಸಂಕೀರ್ಣ ನಿರ್ಮಾಣಕ್ಕೆ ಸುಳ್ಯ ತಾಲೂಕು ಉಬರಡ್ಕ ಗ್ರಾಮದ ಕೊಡಿಯಾಲಬೈಲು ದಲಿತ ಕಾಲನಿಗೆ ಅನುದಾನ ಮಂಜೂರಾಗಿತ್ತು.


ಆದರೆ ಆ ಕಟ್ಟಡವನ್ನು ಕಾಲನಿಯೊಳಗೆ ನಿವಾಸಿಗಳಿಗೆ ಅನುಕೂಲವಾಗುವಂತೆ ನಿರ್ಮಿಸದೆ ಕೊಡಿಯಾಲಬೈಲು ಹಿಂದೂ ರುದ್ರಭೂಮಿ ಒಳಗಡೆ ನಿರ್ಮಿಸಿದ್ದಾರೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ಆರೋಪಿಸಿದೆ.


ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುಂದರ ಪಾಟಾಜೆ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಇದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರು ಇರುವಂತ ಕಾಲೋನಿ ಒಳಗಡೆ ಮಾಡಬೇಕೆಂದು ಸರಕಾರದ ಆದೇಶವಿದೆ. ಆದರೂ ಆದೇಶವನ್ನು ಉಲ್ಲಂಘನೆ ಮಾಡಿ ಕಾಲೋನಿಯಲ್ಲಿ ಆಗಬೇಕಿದ್ದ ಕಟ್ಟಡವನ್ನು ರುದ್ರಭೂಮಿ ಒಳಗಡೆ ಮಾಡಿರುವ ಎಲ್ಲ ಅಧಿಕಾರಿಗಳ ಮೇಲೆ ಮತ್ತು ಇದಕ್ಕೆ ಸಂಬಂಧಪಟ್ಟವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಮತ್ತು ಕೊಡಿಯಾಲಬೈಲು ದಲಿತ ಕಾಲೋನಿಯಲ್ಲಿ ಈ ಕಟ್ಟಡವನ್ನು ನಿರ್ಮಿಸಬೇಕೆಂದು ವೇದಿಕೆ ವತಿಯಂದ ಮೇ.26 ರಂದು ಜಿಲ್ಲಾಧಿಕಾರಿಯವರಿಗೆ ಸುಳ್ಯ ತಾಲೂಕು ಪಂಚಾಯತಿನಲ್ಲಿ ಮನವಿ ಪತ್ರ ಕೊಟ್ಟು ಮನವಿ ಮಾಡಲಾಗಿತ್ತು.
ಆದರೆ ಮನವಿ ಪತ್ರ ಕೊಟ್ಟು 25 ದಿನ ಕಳೆದರೂ ಇದಕ್ಕೆ ಯಾವುದೇ ಉತ್ತರ ಸಿಗದಿರುವ ಕಾರಣ ಜೂನ್ 27ರಂದು ಸುಳ್ಯ ತಾಲೂಕು ಪಂಚಾಯತ್ ಮುಂಭಾಗದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಧರಣಿ ಮಾಡುವುದಾಗಿ ಪಿ.ಸುಂದರ ಪಾಟಾಜೆ
ತಿಳಿಸಿದ್ದಾರೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.