ಸೇವಾಜೆ ಸ.ಕಿ.ಪ್ರಾ. ಶಾಲೆಯಲ್ಲಿ (LOF construction) ಲೋಫ್ ಕನ್ಸ್ ಟ್ರಕ್ಷನ್ ಇದರ ವತಿಯಿಂದ ಆಟದ ಮೈದಾನ ವಿಸ್ತರಣೆ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಶಾಲಾ ವತಿಯಿಂದ ಲೋಪ್ ಕನ್ಸ್ ಟ್ರಕ್ಷನ್ ನ ಕಾರ್ಯವನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಲೋಫ್ ಕನ್ಸ್ ಟ್ರಕ್ಷನ್ ನ ರೈಟರ್ ಮಹಮ್ಮದ್ ಕುಂಞಿ, ಪನಿವಾರ ಗುಳಿಗ ಸಾನಿಧ್ಯದ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಶಾಲಾ ಶಿಕ್ಷಣ ತಜ್ಞ ಅಮೃತ್ ಕುಮಾರ್ ರೈ, ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾದ ಲೀಲಾವತಿ ಸೇವಾಜೆ, ಎಸ್.ಡಿ.ಎಂ.ಸಿ.ಅಧ್ಯಕ್ಷ ಶಶಿಧರ, ಮುಖ್ಯ ಶಿಕ್ಷಕಿ ಪ್ರೇಮಲತ ಹಾಗೂ ಶಿಕ್ಷಕಿಯರು, ವಿದ್ಯಾರ್ಥಿಗಳು ಮತ್ತು ಎಸ್.ಡಿ.ಎಂ.ಸಿ.ಯ ಸದಸ್ಯರು ಉಪಸ್ಥಿತರಿದ್ದರು.