ದಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಸುಳ್ಯ ತಾಲೂಕು ಘಟಕ ಮತ್ತು ಭಾವನಾ ಸುಗಮ ಸಂಗೀತ ಬಳಗ (ರಿ) ಸುಳ್ಯ
ಇವರ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಶಾಲಾ ಕಾಲೇಜುಗಳಲ್ಲಿ
ದೇಶ ಭಕ್ತಿ ಗೀತೆ ಗಾಯನ ಅಭಿಯಾನ 2022 ಇದರ
ಉದ್ಘಾಟನಾ ಸಮಾರಂಭ ಜೂ.22 ರಂದು ಸ ಪ ಪೂ ವಿದ್ಯಾಲಯ ಸುಳ್ಯ ಇಲ್ಲಿ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಎಸ್ .ಅಂಗಾರ ಸಚಿವರು , ಬಂದರು ಮೀನುಗಾರಿಕೆ ಹಾಗೂ ಒಳನಾಡು ಜಲ ಸಾರಿಗೆ ಇವರು ವಹಿಸಲಿದ್ದಾರೆ.
ಉದ್ಘಾಟನೆಯನ್ನು ಸುನೀಲ್ ಕುಮಾರ್ ವಿ
ಸಚಿವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ.ಹಾಗೂ ಇಂಧನ ಇಲಾಖೆ ಇವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿನಯಕುಮಾರ್ ಕಂದಡ್ಕ
ಅಧ್ಯಕ್ಷರು ನಗರ ಪಂಚಾಯತ್ ಸುಳ್ಯ ಇವರು ಭಾಗವಹಿಸಲಿದ್ದಾರೆ ಕಾರ್ಯಕ್ರಮದಲ್ಲಿ ಕು. ಅನಿತಾ ಲಕ್ಷ್ಮೀ ತಹಶೀಲ್ದಾರ್ ಸುಳ್ಯ,ಭವಾನಿಶಂಕರ್ ಎನ್.
ಕಾರ್ಯನಿರ್ವಹಣಾಧಿಕಾರಿಗಳು ತಾಲೂಕು ಪಂಚಾಯತ್ ಸುಳ್ಯ, ಮಹದೇವ ಎಸ್. ಪಿ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುಳ್ಯ, ರಾಜೇಶ್
ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಮಂಗಳೂರು. ಮೋಹನ ಗೌಡ ಬಿ. ಕೆ .ಪ್ರಾಂಶುಪಾಲರು ಸ ಪ ಪೂ ಕಾ ಸುಳ್ಯ ಹಾಗೂ ಪ್ರಕಾಶ್ ಮೂಡಿತ್ತಾಯ ಉಪ ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ಕೆ. ಆರ್. ಗೋಪಾಲಕೃಷ್ಣ ಅಧ್ಯಕ್ಷರು ಭಾವನಾ ಸುಗಮ ಸಂಗೀತ ಬಳಗ ಸುಳ್ಯ, ಶುಭದಾ ಆರ್. ಪ್ರಕಾಶ್, ಶ್ರೀಮತಿ ಗಿರಿಜಾ ಎಂ ವಿ., ಶ್ರೀಮತಿ ಮೀರಾ ಕೆ, ಶ್ರೀಮತಿ ಸತ್ಯವತಿ, ಶ್ರೀಮತಿ ಸುನೀತಾ, ಶ್ರೀಮತಿ ರಮ್ಯಾ ದಿಲೀಪ್ ಬಾಬ್ಲಿಬೆಟ್ಟು ಇವರು ಗಾಯನ ಕಾರ್ಯಕ್ರಮವನ್ನು ನಡೆಸಲಿದ್ದಾರೆ.
ಕಾರ್ಯಕ್ರಮವು ಸ. ಪ .ಪೂ.ಕಾಲೇಜು ಸುಳ್ಯ,
ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲ್ ಸುಳ್ಯ, ನೆಹರು ಸ್ಮಾರಕ ವಿದ್ಯಾಲಯ ಸುಳ್ಯ, ಶಾರದಾ ಪ ಪೂ ವಿದ್ಯಾಲಯ ಸುಳ್ಯ, ಸರಕಾರಿ ಪ್ರೌಢಶಾಲೆ ದುಗಲಡ್ಕ,
ರೋಟರಿ ಪ್ರೌಢಶಾಲೆ ಸುಳ್ಯ, ಸರಕಾರಿ ಪ್ರೌಢಶಾಲೆ ಆಲೆಟ್ಟಿ,
ಸರಕಾರಿ ಪ್ರೌಢ ಶಾಲೆ ಅಜ್ಜಾವರ, ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಮತ್ತುಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿ ನಡೆಯಲಿದೆ ಎಂದು ಕ.ಸಾ.ಪ.ತಾಲೂಕು ಅಧ್ಯಕ್ಷ ಚಂದ್ರಶೇಖರ ಪೇರಾಲು ತಿಳಿಸಿದ್ದಾರೆ.