ಕರ್ನಾಟಕ ರಾಜ್ಯ ಸರ್ಕಾರದ ಅದೀನದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಶಿಶುಪಾಲನಾ ಕೇಂದ್ರ ಇಂದು ಕೆರೆಮೂಲೆ ವಾರ್ಡಿನಲ್ಲಿ ಪ್ರಾರಂಭಗೊಂಡಿತು.
ನೂತನ ಸಂಸ್ಥೆಯನ್ನು ಸುಳ್ಯ ತಾಲೂಕು ಕಾರ್ಮಿಕ ಸಂಘಟನೆಯ ಮುಖಂಡರಾದ ಬಿಜು ಮೇಸ್ತ್ರಿ ಹಾಗೂ ನಾಗರಾಜ ಮೇಸ್ತ್ರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಕಡಬ ಸುಳ್ಯ ವಿಭಾಗದ ಹಿರಿಯ ಕಾರ್ಮಿಕ ನಿರೀಕ್ಷಕರಾದ ಗಣಪತಿ ಹೆಗ್ಡೆ,ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಸ್ಥಳೀಯರಾದ ರಂಜಿತ್ ಪೂಜಾರಿ,ಕೊರ್ಡಿನೆಟರ್ ಕೀರ್ತಿಕಾ ರಂಜಿತ್ ಪೂಜಾರಿ, ಕಟ್ಟಡ ಮಾಲತ ಬಶೀರ್, ಶಿಶುಪಾಲನ ಕೇಂದ್ರದ ಶಿಕ್ಷಕಿಯರಾದ ಜುಲ್ಫಿಕರ್, ಸಹಾಯಕಿ ಸುಮಿತ್ರ ಮೊದಲಾದವರು ಉಪಸ್ಥಿತರಿದ್ದರು.