*ಪಾಂಡಿಗದ್ದೆ ಶಾಲೆಯಲ್ಲಿವಿವಿಧ ಕೊಡುಗೆಗಳ ಹಸ್ತಾಂತರ ಮತ್ತು ಬೀಳ್ಕೊಡುಗೆ ಸಮಾರಂಭ
ಪಾಂಡಿಗದ್ದೆ ದ.ಕ. ಜಿ.ಪಂ.ಕಿ ಪ್ರಾ. ಶಾಲೆಯಲ್ಲಿ ಜೂ.20 ರಂದು ವಿವಿಧ ಕೊಡುಗೆಗಳ ಹಸ್ತಾಂತರ ಮತ್ತು ಪದೋನ್ನತಿ ಹೊಂದಿದ ಶಿಕ್ಷಕಿ ಶ್ರೀಮತಿ ಧರ್ಮಾವತಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಎಸ್ .ಡಿ.ಎಂ ಸಿ ಅಧ್ಯಕ್ಷ ವಾಚಣ್ಣ ಕೆರೆಮೂಲೆ ಸಭಾಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯ ಬಿ ಲಕ್ಷ್ಮಣ ಗೌಡ ಬೊಳ್ಳಾಜೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ದಾನಿಗಳಾದ ಜಯರಾಮ ಕಂಬಳ, ಈಶ್ವರ ಭಟ್ ಬೇರಿಕೆ, ಕುಶಾಲಪ್ಪ ಗೌಡ ದೊಡ್ಡಮನೆ, ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ್ ಕೆ, ಪಂಚಾಯತ್ ಕಾರ್ಯದರ್ಶಿ ಪದ್ಮಯ್ಯ, ಮುಖ್ಯ ಶಿಕ್ಷಕಿ ಧರ್ಮಾವತಿ , ಶಾಲಾ ಮುಖ್ಯ ಶಿಕ್ಷಕ ಯಶೋಧರ ಕೆ, ವಿದ್ಯಾರ್ಥಿ ನಾಯಕ ಮಹಮ್ಮದ್ ಸಲೀತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಕಳೆದ 14 ವರ್ಷಗಳಿಂದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಪದೋನ್ನತಿ ಹೊಂದಿ ಪಡ್ಪಿನಂಗಡಿ ಶಾಲೆಗೆ ವರ್ಗಾವಣೆ ಗೊಂಡ ಮುಖ್ಯ ಶಿಕ್ಷಕಿ ಶ್ರೀಮತಿ ಧರ್ಮಾವತಿ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು.
*ಕೊಡುಗೆಗಳ ಹಸ್ತಾಂತರ* :
ಪಂಜ ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಣ ಗೌಡ ಬೊಳ್ಳಾಜೆ , ಶ್ರೀಮತಿ ಮಲ್ಲಿಕಾ ರವರ ಅನುದಾನದಿಂದ ನಲಿಕಲಿ ಕೊಠಡಿಗೆ ಅಳವಡಿಸಲಾದ ಟೈಲ್ಸ್ ಲೋಕಾರ್ಪಣೆ, ದಾನಿಗಳಾದ ಜಯರಾಮ ಕಂಬಳರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕೊಡಮಾಡಿದ ನೋಟ್ ಪುಸ್ತಕದ ವಿತರಣೆ, ಸತೀಶ್ ಭಟ್ ಬೇರಿಕೆ ರವರು ಕೊಡಮಾಡಿದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಐಡಿ ವಿತರಣೆ, ಡಾ.ದೇವಿಪ್ರಸಾದ್ ರವರು ಕೊಡಮಾಡಿದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಬೆಲ್ಟ್ ವಿತರಣೆ ಜರುಗಿತು.
ಕಾರ್ಯಕ್ರಮದಲ್ಲಿ ಯಶೋಧರ ಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಅಶೋಕ್ ಕುಮಾರ್ ನಿರೂಪಿಸಿದರು. ಅತಿಥಿ ಶಿಕ್ಷಕಿ ಶ್ರೀಮತಿ ವಿಂದ್ಯಾ ವಂದಿಸಿದರು.