ಭಾರತ ಸರ್ಕಾರ, ಆಯುಷ್ ಇಲಾಖೆ,ನೆಹರೂ ಯುವ ಕೇಂದ್ರ ಮಂಗಳೂರು,ಜಿಲ್ಲಾಡಳಿತ ಮಂಗಳೂರು,ತಾಲೂಕು ಪಂಚಾಯತ್ ಸುಳ್ಯ,ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸುಳ್ಯ,ರೆಡ್ ಕ್ರಾಸ್ ಘಟಕ ಎನ್.ಎಂ.ಸಿ ಸುಳ್ಯ, ಯುವಕ ಮಂಡಲಗಳ ಸಹಯೋಗದಲ್ಲಿ ಸರಕಾರದ ನಿಯಮದಂತೆ ಚೆನ್ನಕೇಶವ ದೇವಸ್ಥಾನದಲ್ಲಿ ಜೂ.20 ರಂದು 8 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪೂರ್ವ ಭಾವಿ ಪ್ರೊಟೊಕಾಲ್ ಮಾಹಿತಿ ಕಾರ್ಯಗಾರ ನಡೆಯಿತು.
ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉಮೇಶ್ ಪಿ.ಕೆ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕಿ ಅನುರಾಧ ಕುರುಂಜಿ,ಕ್ರೀಡಾ ಭಾರತಿ ತಾಲೂಕು ಉಪಾಧ್ಯಕ್ಷ ಶರತ್ ಅಡ್ಕಾರು ಹಾಗೂ ಚೆನ್ನಕೇಶವ ದೇವಸ್ಥಾನ ಸಿಬ್ಬಂದಿ ಕೃಷ್ಣ ಭಟ್ ಅತಿಥಿಗಳಾಗಿದ್ದರು.
ಯೋಗ ಪ್ರೋಟೋಕಾಲ್ ಮಾಡಿಸಿ ಯೋಗದ ಮಹತ್ವ ಕುರಿತು ಮಾಹಿತಿ ನೀಡಲಾಯಿತು. ಯೋಗೇನ ಚಿತ್ತಸ್ಯ ತಂಡದ ಯೋಗಪಟುಗಳಿಂದ ಯೋಗ ಪ್ರಾತ್ಯಕ್ಷಿಕೆ ಹಾಗೂ ಆಯುಷ್ ನಿರ್ದೇಶನದ ಪ್ರೋಟೋಕಾಲ್ ನಡೆಯಿತು.
ಯೋಗ ಗುರು ಸಂತೋಷ್ ಮುಂಡಕಜೆ ಕಾರ್ಯಕ್ರಮ ನಿರೂಪಿಸಿದರು.