ಜ್ಯೋತಿ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಮತ್ತು ಸನ್ಮಾ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಜ್ಯೋತಿ ವಿದ್ಯಾ ಸಂಘ ರಿ. ಪೆರಾಜೆ ಮತ್ತು ಜ್ಯೋತಿ ಪ್ರೌಢ ಶಾಲೆಯ ಹಿರಿಯ ವಿಧ್ಯಾರ್ಥಿ ಸಂಘ ಇದರ ಜಂಟಿ ಆಶ್ರಯದಲ್ಲಿ 2022-23ನೇ ಸಾಲಿನಲ್ಲಿ ನಿವೃತ್ತರಾದ ಮುಖ್ಯಶಿಕ್ಷಕ ಎ.ವೇಣುಗೋಪಾಲ ಕೊಯಿಂಗಾಜೆ , ಹಿಂದಿ ಭಾಷಾ ಶಿಕ್ಷಕಿ ಮೋಹನಾಂಗಿ ಎಂ.ಎಸ್ ಮತ್ತು ಮುಖ್ಯ ಅಡುಗೆ ಸಹಾಯಕಿ ವಿಜಯ ರವರ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮವು ಜೂ.18ರಂದು ಜ್ಯೋತಿ ಪ್ರೌಢ ಶಾಲೆಯ ಸಭಾಂಗಣ ದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ವಿದ್ಯಾ ಸಂಘ ದ ಅಧ್ಯಕ್ಷರಾದ ಡಾ. ಎನ್.ಎ.ಜ್ಞಾನೇಶ್ ವಹಿಸಿದ್ದರು. ವೇದಿಕೆಯಲ್ಲಿ ಶಾಲೆಯ ಸಂಚಾಲಕರಾದ ಹರಿಶ್ಚಂದ್ರ ಮುಡ್ಕಾಜೆ, ಉಪಾಧ್ಯಕ್ಷರಾದ ಪದ್ಮಯ್ಯ ಕುಂಬಳಚೇರಿ, ಪ್ರೌಢ ಶಾಲೆಯ ಸ್ಥಾಪಕರು ಹಿರಿಯ ನಿವೃತ್ತ ಶಿಕ್ಷಕರಾದ ಪೂವಪ್ಪ ಮಾಸ್ತರ್ ದೊಡ್ಡಡ್ಕ, ವೃತ್ತಿ ಶಿಕ್ಷಕ ಸುರೇಶ್ ಹೆಗ್ಡೆ ಕೆ., ಪೆರಾಜೆ ಕ್ಲಸ್ಟ ರಿನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ರೇಖಾ ಅಡ್ಕ, ಎಸ್.ಡಿ.ಎಂ. ಸಿ.ಅಧ್ಯಕ್ಷೆ ಶ್ರೀಮತಿ ವಿದ್ಯಾ ಕುಮಾರಿ ಬಂಗಾರಕೋಡಿ, ಹಿರಿಯ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಉದಯ ಕುಂಬಳಚೇರಿ ಹಾಗೂ ನಿವೃತ್ತ ಶಿಕ್ಷಕರು ಗಳಾದ ವೇಣುಗೋಪಾಲ ಕೊಯಿಂಗಾಜೆ ಮತ್ತು ಶ್ರೀಮತಿ ಮೋಹನಾಂಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ದೊಡ್ಡಣ್ಣ ಬರಮೇಲು,ನಿವೃತ್ತ ದ್ವಿತೀಯ ದರ್ಜೆ ಸಹಾಯಕ ರಾದ ನಾರಾಯಣ ಬಿ.ಎಂ. ಹಾಗೂ ಜ್ಯೋತಿ ವಿದ್ಯಾ ಸಂಘದ ಎಲ್ಲಾ ನಿರ್ದೇಶಕರು, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಪೋಷಕ ವೃಂದದವರು ಶಿಕ್ಷಕರು, ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಸನ್ಮಾನಿತರಾದ ನಿವೃತ್ತ ಶಿಕ್ಷಕ ರಾದ ವೇಣುಗೋಪಾಲ ಎ.ರವರ ಸನ್ಮಾನ ಪತ್ರವನ್ನು ಮುಖ್ಯ ಶಿಕ್ಷಕ ನರೇಂದ್ರ ಎಂ. ಆರ್.ರವರು ಹಾಗೂ ನಿವೃತ್ತ ಶಿಕ್ಷಕಿ ಮೋಹನಾಂಗಿಯವರ ಸನ್ಮಾನ ಪತ್ರವನ್ನು ವಿಜ್ಞಾನ ಶಿಕ್ಷಕ ನಾಗರಾಜ್ ಜಿ.ಆರ್. ರವರು ವಾಚಿಸಿದರು. ಕಾರ್ಯಕ್ರಮದಲ್ಲಿ ಜ್ಯೋತಿ ವಿದ್ಯಾ ಸಂಘದ ಕಾರ್ಯದರ್ಶಿ ಲೋಕನಾಥ ಅಮೆಚೂರು ಸ್ವಾಗತಿಸಿದರು. ಮುಖ್ಯಶಿಕ್ಷಕ ನರೇಂದ್ರ ಎಂ. ಆರ್ ರವರು ವಂದನಾರ್ಪಣೆ ಸಲ್ಲಿಸಿದರು. ಶ್ರೀಮತಿ ಚಂದ್ರಮತಿ ಕುಂಬಳಚೇರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.