ಸುಳ್ಯ ಸ್ನೇಹ ವಿದ್ಯಾ ಸಂಸ್ಥೆಯಲ್ಲಿ ಯೋಗ ದಿನಾಚರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಯೋಗವು ಮನಸ್ಸು, ದೇಹ ಮತ್ತು ಪ್ರಕೃತಿಯನ್ನು ಸಂತುಲಿತಗೊಳಿಸುತ್ತದೆ : ಡಾ.ದಾಮ್ಲೆ

“ಯೋಗವು ವಿಶ್ವದೆಲ್ಲೆಡೆ ಪ್ರಸಾರಗೊಳ್ಳುತ್ತಿರುವ ಜ್ಞಾನದ ಶಾಖೆಯಾಗಿದ್ದು, ಅದು ಭಾರತ ಮೂಲದ್ದಾಗಿದೆ. ಭಾರತದ ಬೇರೆ ಬೇರೆ ಭಾಗಗಳಲ್ಲಿ ಆಚರಣೆಯಲ್ಲಿದ್ದ ಯೋಗವು ವಿಶ್ವಸಂಸ್ಥೆಯ ನಿರ್ಣಯದಿಂದ ಜಗತ್ತಿಗೆ ಪರಿಚಯವಾಯಿತು. ಯೋಗ ಪ್ರತಿಯೊಬ್ಬನ ಜೀವನದಲ್ಲಿ ಅಗತ್ಯವಾಗಿ ಅಳವಡಿಸಿಕೊಳ್ಳಬೇಕಾಗಿದೆ. ಏಕೆಂದರೆ ಯೋಗ ಮನಸ್ಸು ದೇಹ ಮತ್ತು ಪ್ರಕೃತಿಯನ್ನು ಸಂತುಲಿತಗೊಳಿಸುತ್ತದೆ” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು. ಇವರು ದಿನಾಂಕ 21/06/2022 ರಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಜರಗಿದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯೋಗಬಂಧುಗಳನ್ನು ಉದ್ದೇಶಿಸಿ ಮಾತನಾಡಿದರು.


ಬಳಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳೆಲ್ಲರೂ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರ ಮಾರ್ಗದರ್ಶನದಲ್ಲಿ ಶಾಲೆಯ ಸೂರ್ಯದೇವಾಲಯದಲ್ಲಿ ಸೂರ್ಯನಮಸ್ಕಾರ ಮತ್ತು ಯೋಗಭ್ಯಾಸ ಮಾಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.