ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಯೋಗ ದಿನ ಆಚರಣೆ ಮಾಡಲಾಯಿತು. ದೇವಸ್ಥಾನದ ರಥಬೀದಿಯಲ್ಲಿ ಯೋಗದ ವಿವಿಧ ಆಸನಗಳನ್ನು ಮಾಡಲಾಯಿತು. ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ದೀಪ ಬೆಳಗಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, , ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಡಾ। ನಿಂಗಯ್ಯ, ವ್ಯವಸ್ಥಾಪನಾ ಸಮಿತಿಯ ಪ್ರಸನ್ನ ದರ್ಬೆ, ಮನೋಹರ ರೈ, ವನಜಾ ಭಟ್, ಶೋಭಾ ಗಿರಿಧರ್, ಕೆ ಎಸ್ ಎಸ್ ಕಾಲೇಜಿನ ಪ್ರಾಂಶುಪಾಲ ದಿನೇಶ್ ಪಿ ಟಿ, ಎಸ್ ಎಸ್ ಪಿ ಯು ಕಾಲೇಜು ಪ್ರಾಂಶುಪಾಲ ಸೋಮಶೇಖರ್, ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ಯಶವಂತ ರೈ ಉಪಸ್ಥಿತರಿದ್ದರು. ಕೃಷ್ಣ ಭಟ್ ಮತ್ತು ಭಾಲಕೃಷ್ಣ ಅವರು ಮಾರ್ಗದರ್ಶನ ನೀಡಿದರು.
ಯಶವಂತ್ ರೈ ಸ್ವಾಗತಿಸಿ, ಸೋಮಶೇಖರ್ ವಂದಿಸಿದರು. ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು.
ದೇವಸ್ಥಾನದ ಸಿಬ್ಬಂದಿ ವರ್ಗದವರು, ಸ್ಥಳೀಯ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತಿತರರು ಉಪಸ್ಥಿತರಿದ್ದರು.
ಪೋಟೋ: ಪ್ರತಿರೂಪ ಸುಬ್ರಹ್ಮಣ್ಯ