Breaking News

ಕೆ.ವಿ.ಜಿ. ಐ.ಟಿ.ಐ.ಯಲ್ಲಿ ಎರಡು ಹೊಸ ಕೋರ್ಸುಗಳ ಆರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಳ್ಯ ಕೆ.ವಿ.ಜಿ. ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎರಡು ಹೊಸ ಕೋರ್ಸುಗಳು ಶೀಘ್ರವಾಗಿ ಆರಂಭ ಮಾಡುವುದಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾಪ್ರಸಾದ್ ತಿಳಿಸಿರುತ್ತಾರೆ. ಮೇ.16 ರಂದು ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿರುತ್ತಾರೆ.

ಕಳೆದ ಮೂವತ್ತೇಳು ವರ್ಷಗಳಿಂದ ಸರಕಾರದ ಅನುದಾನಕೊಳಪಟ್ಟ ಈ ಸಂಸ್ಥೆಯು ಮೆಕಾನಿಕಲ್ ಮೋಟಾರ್ ವೆಹಿಕಲ್ ಇಲೆಕ್ಟ್ರಿಷಿಯನ್ ಮತ್ತು ಇಲೆಕ್ಟ್ರಾ

ನಿಕ್ ಮೆಕಾನಿಕ್ ಟ್ರೇಡ್‌ಗಳ ಮೂಲಕ ತರಬೇತಿ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನಗಳ ಅವಶ್ಯಕತೆಯಿರುವ ಎರಡು ನೂತನ ಟ್ರೇಡ್‌ಗಳನ್ನು ಆಯ್ಕೆ ಮಾಡಿಕೊಂಡು, ಅತೀ ಶೀಘ್ರವಾಗಿ ತೆರೆಯುವಂತೆ ಮತ್ತು ಅವುಗಳಿಗೆ ಪೂರಕವಾದ ವಲಯ ಸೌಕರ್ಯ ಒದಗಿಸುವಂತೆ ಆಡಳಿತ ಮಂಡಳಿ ತೀರ್ಮಾನವನ್ನು ಕೈಗೊಂಡಿತು.
ಈ ಸಭೆಯಲ್ಲಿ ಕೆ.ವಿ.ಜಿ. ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಆಡಳಿತ ಸಲಹೆಗಾರ ಡಾ.ಉಜ್ವಲ್ ಊರುಬೈಲು, ಸಂಸ್ಥೆಯ ಪ್ರಾಚಾರ್ಯರಾದ ಚಿದಾನಂದ ಗೌಡ ಬಾಳಿಲ, ಗವರ್ನಿಂಗ್ ಕೌನ್ಸಿಲ್ ಸದಸ್ಯರು ಹಾಗೂ, ತರಬೇತಿ ಅಧಿಕಾರಿ ದಿನೇಶ್ ಮಡ್ತಿಲ, ದಯಾನಂದ ಕುರುಂಜಿ, ದೀಪಕ್ ಕುತ್ತಮೊಟ್ಟ, ಪ್ರಸನ್ನ ಕಲ್ಲಾಜೆ ಹಾಗೂ ಕೆ.ವಿ.ಜಿ. ಐ.ಟಿ.ಐಯ ಎಲ್ಲಾ ಕಿರಿಯ ತರಬೇತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.