ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೂ. 20ರಂದು ನಡೆದ ಗವರ್ನಿಂಗ್ ಕೌನ್ಸಿಲ್ ಸಭೆಯು ಎ.ಒ.ಎಲ್.ಇ.(ರಿ), ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ.ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ.ಯವರು ವಿವಿಧ ಶೈಕ್ಷಣಿಕ ಸಂಬಂಧಿತ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಆಡಳಿತ ಮಂಡಳಿಯಿಂದ ಲಭಿಸುತ್ತಿರುವ ಸೂಕ್ತ ಮಾರ್ಗದರ್ಶನ – ಪ್ರೊತ್ಸಾಹಗಳ ಬಗ್ಗೆ, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಡಾ. ಉಜ್ವಲ್ ಯು.ಜೆ. ಅವರಿಂದ ವಿವಿಧ ಚಟುವಟಿಕೆಗಳಿಗೆ ಸಿಗುತ್ತಿರುವ ಸೂಕ್ತ ಸ್ಪಂದನೆ ಮತ್ತು ಸಹಕಾರಗಳ ಬಗ್ಗೆ ಮಾತನಾಡುತ್ತಾ ವಿವಿಧ ವಿಭಾಗಗಳ ಮುಖ್ಯಸ್ಥರುಗಳನ್ನು, ನಿರ್ದೇಶಕರುಗಳನ್ನು ಹಾಗೂ ನೂತನವಾಗಿ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಿಕೊಂಡ ಸಂಯೋಜಕರುಗಳನ್ನು ಪರಿಚಯಿಸಿದರು. ಕಳೆದ ಜೂ. 10ರಂದು ನಡೆದ ಡಾ. ಕೆ.ವಿ.ಜಿ. ಸ್ಕಾಲರ್ಶಿಪ್ ಆನ್ ಲೈನ್ ಟೆಸ್ಟ್
ಫಲಿತಾಂಶವನ್ನು ಗವರ್ನಿಂಗ್ ಕೌನ್ಸಿಲ್ನ ಸದಸ್ಯರಲ್ಲೊಬ್ಬರಾದ ನಿತ್ಯಾನಂದ ಮುಂಡೋಡಿಯವರು ಪ್ರಕಟಿಸಿದರು. ಇನ್ನೋರ್ವ ಸದಸ್ಯರಾದ ಸಂತೋಷ್ ಜಾಕೆಯವರು ನೂತನ ಕೆ.ವಿ.ಜಿ. ವೆಬ್ಸೈಟ್ ನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಡಾ. ರೇಣುಕಾಪ್ರಸಾದ್ ಕೆ.ವಿ.ಯವರು ಸಭೆಯನ್ನುದ್ದೇಶಿಸಿ ಅಡ್ಮಿಶನ್, ಪ್ಲೇಸ್ಮೆಂಟ್ ಹಾಗೂ ಫಲಿತಾಂಶಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಹಾಗೂ ಈ ನಿಟ್ಟಿನಲ್ಲಿ ಕಾಲೇಜಿನಿಂದ ವಿವಿಧ ರೂಟ್ಗಳಲ್ಲಿ ಬಸ್ಸಿನ ವ್ಯವಸ್ಥೆ ಮತ್ತು ಆಫೀಸ್ ಅಟೋಮೇಶನ್, ಪ್ರಯೋಗಾಲಯ, ಹಾಸ್ಟೆಲ್ ಇತ್ಯಾದಿಗಳ ಆಧುನೀಕರಣ ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಿತ್ಯಾನಂದ ಮುಂಡೋಡಿ ಹಾಗೂ ಸಂತೋಷ್ ಜಾಕೆಯವರನ್ನು
ಡಾ. ರೇಣುಕಾಪ್ರಸಾದ್ ಕೆ.ವಿ.ಯವರು ಸನ್ಮಾನಿಸಿ ಅವರ ಸಹಕಾರವನ್ನು ಕೋರಿದರು. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಡಾ. ಉಜ್ವಲ್ ಯು.ಜೆ. ಅವರು ಮಾತನಾಡುತ್ತಾ ಇಂಜಿನಿಯರಿಂಗ್ ಕಾಲೇಜುಗಳಿಗೆ ಈಗಿರುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಯೋಜನೆಗಳ ಬಗ್ಗೆ ವಿವರಿಸಿ ವಂದಿಸಿದರು. ಗವರ್ನಿಂಗ್ ಕೌನ್ಸಿಲ್ನ ಸದಸ್ಯರುಗಳಾದ ಡಾ. ಜ್ಯೋತಿ ಆರ್. ಪ್ರಸಾದ್, ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು ಹಾಗೂ ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ ಉಪಸ್ಥಿತರಿದ್ದರು.