ಅಧ್ಯಕ್ಷೆ-ಶ್ರೀಮತಿ ತಿರುಮಲೇಶ್ವರಿ ಅಲೇಕಿ, ಉಪಾಧ್ಯಕ್ಷೆ – ಶ್ರೀಮತಿ ಗೀತಾ ಯಂ.ಬಿ.ಮಾಳ
ಮದ್ಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ನಿ.ಮುರುಳ್ಯ ಇದರ ಆಡಳಿತ ಮಂಡಳಿಗೆ ಚುನಾವಣೆಯು ಮೇ.27ರಂದು ನಡೆಯಿತು. ದ.ಕ.ಜಿಲ್ಲೆಯ ಸಹಾಯಕ ನಿಬಂಧಕರ ಕಚೇರಿಯ ಶಿವಲಿಂಗಯ್ಯನವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ನಿರ್ದೇಶಕರುಗಳಾಗಿ ಶ್ರೀಮತಿ ಭಾರತಿ ರೈ,ಶ್ರೀಮತಿ ವಾರಿಜ ಎಂ., ಶ್ರೀಮತಿ ಸರೋಜಿನಿ. ಶ್ರೀಮತಿ ಕವಿತಾ ಕೆ.ಎ.,ಶ್ರೀಮತಿ ಗುಲಾಬಿ ವಿ.ಶೆಟ್ಟಿ, ಶ್ರೀಮತಿ ಪುಷ್ಪಾ ಪಿ.ರೈ, ಶ್ರೀಮತಿ ವನಿತಾ ಬಿ., ಶ್ರೀಮತಿ ಚಂದ್ರಾವತಿ ರೈ,ಶ್ರೀಮತಿ ಲಲಿತಾ ಅವಿರೋಧವಾಗಿ ಆಯ್ಕೆಯಾದರು.
ಶ್ರೀಮತಿ ತಿರುಮಲೇಶ್ವರಿ ಅಲೇಕಿ
ಸಂಘದ ಅಧ್ಯಕ್ಷರಾಗಿ ಶ್ರೀಮತಿ ತಿರುಮಲೇಶ್ವರಿ ಅಲೇಕಿ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಗೀತಾ ಯಂ.ಬಿ.ಮಾಳ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಶ್ರೀಮತಿ ನಿಶ್ಮಿತಾ ರಮೇಶ್ ಕಾರ್ಯದಶಿಯಾಗಿ, ಶ್ರೀಮತಿ ಹೇಮಲತ ಹಾಲು ಪರೀಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀಮತಿ ಗೀತಾ ಯಂ.ಬಿ.ಮಾಳ