ಮುಡ್ನೂರು ಮರ್ಕಂಜ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ ಜೂ.21ರಂದು ನಡೆಯಿತು.ಮರ್ಕಂಜ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಪವಿತ್ರ ಗುಂಡಿ ದೀಪ ಬೆಳಗಿಸುವುದರ ಮೂಲಕ ಯೋಗ ದಿನಾಚರಣೆಗೆ ಚಾಲನೆ ನೀಡಿ ಉತ್ತಮ ಆರೋಗ್ಯ ಸಧೃಡತೆಗೆ ಪ್ರತೀ ದಿನ ಯೋಗ ಮಾಡುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋವಿಂದ ಅಳವುಪಾರೆ ಹಾಗೂ ಸದಸ್ಯ ರಾಜೇಂದ್ರ ಕೊಚ್ಚಿ ಉಪಸ್ಥಿತರಿದ್ದು, ಯೋಗದ ಮಹತ್ವದ ಕುರಿತು ಅರಿವು ಮೂಡಿಸಿದರು. ಎಸ್.ಡಿ.ಎಮ್.ಸಿ. ಅಧ್ಯಕ್ಷೆ ಮೀನಾಕ್ಷಿ ಬಿ., ಉಪಾಧ್ಯಕ್ಷ ಅನಿಲ್ ಅಂಬೆಕಲ್ಲು, ಸಹಶಿಕ್ಷಕಿಯರಾದ ನಿಶಾ ಕುಮಾರಿ, ಧನ್ಯ ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯೋಪಾಧ್ಯಾಯ ದೇವರಾಜ ಎಸ್.ಕೆ. ಸ್ವಾಗತಿಸಿದರು. ಶಿಕ್ಷಕ ಬೆಳ್ಳಪ್ಪ ಕೆ. ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ಚಿನ್ನಮ್ಮ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಮಮತಾ ವಿದ್ಯಾರ್ಥಿಗಳನ್ನು ಅಣಿಗೊಳಿಸಿದರು. ಸಂಸ್ಥೆಯ ೮೮ ವಿದ್ಯಾರ್ಥಿಗಳು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರದರ್ಶನ ಮಾಡಿದರು.