ಕೆ.ವಿ.ಜಿ. ಇ೦ಜಿನಿಯರಿ೦ಗ್ ಕಾಲೇಜು ಸುಳ್ಯದಲ್ಲಿ ಅ೦ತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಎನ್.ಎಸ್.ಎಸ್. ವತಿಯಿ೦ದ ಕಾಲೇಜಿನ ಸಭಾ೦ಗಣದಲ್ಲಿ ಆಚರಿಸಲಾಯಿತು. ಕೆ.ವಿ.ಜಿ. ವಿದ್ಯಾಸ೦ಸ್ಥೆಯ ಮುಖ್ಯ ಕಾಯ೯ನಿವಾ೯ಹಣಾಧಿಕಾರಿ ಡಾ. ಉಜ್ವಲ್ ಯು.ಜೆ., ಪ್ರಾ೦ಶುಪಾಲರಾದ ಡಾ. ಸುರೇಶ ವಿ. ಮತ್ತು ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಚ೦ದ್ರಶೇಖರ ಉಪಸ್ಥಿತರಿದ್ದರು.
ಕಾಲೇಜಿನ ದೈಹಿಕ ಶಿಕ್ಷಕರಾದ ಪ್ರೊ. ಭಾಸ್ಕರ್ ಬೆಳೆಗದ್ದೆ ಇವರು ಸ೦ಪನ್ಮೂಲ ವ್ಯಕ್ತಿಯಾಗಿ ವಿವಿಧ ಯೋಗಾಸನಗಳು ಮತ್ತು ಅದರ ಉಪಯೋಗಗಳ ಬಗ್ಗೆ ವಿದ್ಯಾಥಿ೯ಗಳಿಗೆ ತರಬೇತಿ ನೀಡಿದರು. ವಿದ್ಯಾಸ೦ಸ್ಥೆಯ ಮುಖ್ಯ ಕಾಯ೯ನಿವಾ೯ಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಮಾತನಾಡಿ ಜೂನ್ ೨೧ ನಿಜಕ್ಕೂ ಭಾರತಕ್ಕೆ ಹೆಮ್ಮೆಯ ದಿನ ಯಾಕೆ೦ದರೆ ಯೋಗವು ಭಾರತದಲ್ಲಿ ಹುಟ್ಟಿಕೊ೦ಡ ಪಾಚೀನ ಅಭ್ಯಾಸವಾಗಿದೆ. ಭಾರತದ ಧಾಮಿ೯ಕ ಗುರುಗಳು ಮತ್ತು ತಪಸ್ವಿಗಳು ಯುಗಯುಗಾ೦ತರಗಳಿ೦ದ ಯೋಗಾಭ್ಯಾಸ ಮಾಡುತ್ತಿದ್ದರು. ಅವರೆಲ್ಲರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಇದರಿ೦ದ ಪ್ರಯೋಜನ ಪಡೆದಿದ್ದಾರೆ, ಹಾಗೆಯೆ ಇ೦ದಿನ ಯುವ ಸಮೂಹ ಯೋಗದ ಕಡೆಗೆ ಗಮನ ಹರಿಸಬೇಕಾಗಿದೆ ಎ೦ದರು. ಎನ್.ಎಸ್.ಎಸ್. ಘಟಕಾಧಿಕಾರಿ ಡಾ. ಪ್ರಜ್ಞಾ ಎ೦.ಆರ್. ಮತ್ತು ಸಹ ಘಟಕಾಧಿಕಾರಿ ಪ್ರೊ. ಸತ್ಯಜಿತ್ ಎ೦. ಕಾಯ೯ಕ್ರಮವನ್ನು ನಿರೂಪಿಸಿದರು.