ನುಸ್ರತುಲ್ ಇಸ್ಲಾಮ್ ಎಸೋಸಿಯೇಶನ್ ಎಲಿಮಲೆ ಇದರ ರೂಬಿ ಜ್ಯುಬಿಲಿ ಪ್ರಯುಕ್ತ ಮದ್ರಸ ಅಧ್ಯಾಪಕರಿಗೆ ಬೀಳ್ಕೊಡುಗೆ,
ಹಳೆ ವಿದ್ಯಾರ್ಥಿಗಳ ಹಾಗೂ ಪೋಷಕರ ಸಂಗಮವು ನೂರುಲ್ ಹುದಾ ಮದ್ರಸ ಇದರ ವಠಾರದಲ್ಲಿ ಜರಗಿತು.
ನೂರುಲ್ ಹುದಾ ಮದ್ರಸ ಎಲಿಮಲೆಯ ಸದರ್ ಮುಅಲ್ಲಿಂ ಮಹಮೂದ್ ಸಖಾಫಿ, ನೂರುಲ್ ಹುದಾ ಮದ್ರಸ ಮೆತ್ತಡ್ಕ ಇದರ ಅಧ್ಯಾಪಕ ಶಫೀಕ್ ಹನೀಫಿ,
ಜೀರ್ಮುಕ್ಕಿ ಮಸೀದಿಯ ಇಮಾಮರು ಹಾಗೂ ಬುಸ್ತಾನುಲ್ ಉಲೂಂ ಮದ್ರಸ ಇದರ ಅಧ್ಯಾಪಕರೂ ಆದ ಸೂಫಿ ಮುಸ್ಲಿಯಾರ್ ಪಾಣಾಜೆ ಇವರನ್ನು ಶಾಲು ಹೊದಿಸಿ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು .
ಎಲಿಮಲೆ ಜಮಾ ಅತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ಹಾಗೂ ಜಟ್ಟಿಪಳ್ಳ ಮಸೀದಿ ಸಮಿತಿ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಇವರು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು…
ಜೀರ್ಮುಕ್ಕಿ ಮಸೀದಿಯ ಇಮಾಮರಾದ ಅಶ್ರಫ್ ಜೌಹರಿ ಕುಂಭಕ್ಕೋಡು ರವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲತೀಫ್ ಹರ್ಲಡ್ಕ ವಹಿಸಿದ್ದರು.
ಸಂಗಮ ವನ್ನುದ್ದೇಶಿಸಿ ಎಲಿಮಲೆ ಮುದರ್ರಿಸ್ ಜೌಹರ್ ಅಹ್ಸನಿ ಅವರು ಮಾತನಾಡಿ ಸಮಾಜವು ಪ್ರಸಕ್ತ ಸನ್ನಿವೇಶದಲ್ಲಿ ಎದುರಿಸುತ್ತಿರುವ ಮದ್ಯ, ಮಾದಕ ವಸ್ತುಗಳು ಸೇರಿದಂತೆ ಹಲವಾರು ಸಾಮಾಜಿಕ ಪಿಡುಗುಗಳನ್ನು ನಿಯಂತ್ರಿಸಿ ಸಮುದಾಯಕ್ಕೆ ಉತ್ತಮ ಸುಸಂಸ್ಕೃತವಾದ ಜೀವನ ನಡೆಸಲು ಬೇಕಾದ ಶಿಕ್ಷಣ ನೀಡುವಲ್ಲಿ ಮದ್ರಸಗಳ ಪಾತ್ರ ಹಿರಿದಾಗಿದೆ. ಈ ನಿಟ್ಟಿನಲ್ಲಿ ಮದ್ರಸಾ ಅಧ್ಯಾಪಕರ ಶ್ರಮ ಶ್ಲಾಘನೀಯವಾಗಿದೆ ಎಂದು ಪ್ರಶಂಸಿಸಿದರು..
ಕಾರ್ಯಕ್ರಮದಲ್ಲಿ ಎಲಿಮಲೆ ಮಸೀದಿಯ ಮ್ಯಾನೇಜರ್ ಅಬ್ದುಲ್ ಹಕೀಂ ಅಶ್ಹರಿ, ಎಲಿಮಲೆ ಮದ್ರಸ ಅಧ್ಯಾಪಕರಾದ ಫೈಝಲ್ ಹಿಮಮಿ ಅಲ್ ಹಾದಿ ಸಖಾಫಿ ಉಪಸ್ಥಿತರಿದ್ದರು..
ಸಮಿತಿ ಕಾರ್ಯದರ್ಶಿ ಸೂಫಿ ಎಲಿಮಲೆ ಪ್ರಸ್ತಾವನೆ ಗೈದು ವಂದಿಸಿದರು.