ಸುಳ್ಯದ ಸೈಂಟ್ ಜೋಸೆಫ್ ಪ್ರಾಥಮಿಕ ಶಾಲಾ ಮಂತ್ರಿ ಮಂಡಲದ ಪದಗ್ರಹಣ ಸಮಾರಂಭವು ಜೂ.20 ರಂದು ನಡೆಯಿತು.
ಶಾಲಾ ನಾಯಕಿಯಾಗಿ ಸಾರಿಕ (7ನೇ ತರಗತಿ), ಉಪನಾಯಕನಾಗಿ ಚಿರಂತ್ (7ನೇ ತರಗತಿ) ಹಾಗೂ ಉಳಿದ ಮಂತ್ರಿ ಮಂಡಲದ ಸದಸ್ಯರು ಪ್ರಮಾಣ ವಚನ ಸ್ವೀಕಾರ ಮಾಡಿದರು. ಶಾಲಾ ಮುಖ್ಯ ಶಿಕ್ಷಕಿ ಸಿ. ಬಿನೋಮ ಪ್ರಮಾಣ ವಚನವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಫಾ. ವಿಕ್ಟರ್ ಡಿಸೋಜ ರವರು ಮಕ್ಕಳಿಗೆ ಮಂತ್ರಿ ಮಂಡಲದ ಮಹತ್ವವನ್ನು ತಿಳಿಸಿ ಶುಭ ಹಾರಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯದರ್ಶಿ ಶ್ರೀಮತಿ ಮಮತಾ ರವರು ಕಾರ್ಯ ಕ್ರಮದಲ್ಲಿ ಉಪಸ್ಥಿತಿಯಲ್ಲಿದ್ದರು.
7ನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ .ಕೆ ಸ್ವಾಗತಿಸಿ, ಶ್ರೀಮತಿ ಸವಿತಾ ಯಸ್. ವಂದಿಸಿದರು. ಶ್ರೀಮತಿ ಲತಾ ಟಿ .ಯು. ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕಿ ಶ್ರೀಮತಿ ಪುಷ್ಪವೇಣಿ ಸಹಕರಿಸಿದರು.