ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಜೂ. 21 ರಂದು ನಡೆಯಿತು. ಕಾರ್ಯಕ್ರಮವನ್ನು ಕುಮಾರಸ್ವಾಮಿ ಕೆ.ಎಸ್ ಉದ್ಘಾಟಿಸಿ ವಿದ್ಯಾರ್ಥಿ ಜೀವನದಲ್ಲಿ ಕಾಲೇಜು ಶಿಕ್ಷಣದ ಪ್ರಾಮುಖ್ಯತೆಯು ಬಗ್ಗೆ ತಿಳಿಸಿದರು. ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ಮಾತನಾಡಿ ಕಾಲೇಜಿನ ವ್ಯವಸ್ಥೆ, ನಿಯಮಗಳು, ಶೈಕ್ಷಣಿಕ ಪದ್ದತಿಗಳ ಬಗ್ಗೆ ತಿಳಿಸಿದರು.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ರಕ್ಷಿತ್ ಸ್ವಾಗತಿಸಿ ವಿಜ್ಞಾನ ವಿಭಾಗದ ಅನನ್ಯ ವಂದಿಸಿದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ರಿಫಾಷ ಶೇಖ್ ನಿರೂಪಿಸಿದರು. ಉಪನ್ಯಾಸಕಿಯರಾದ ನಿಶಾ ಬಿ.ಎಸ್ ಮತ್ತು ಧನ್ಯ ಕೆ.ವಿ ಮಾರ್ಗದರ್ಶನ ನೀಡಿದರು . ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಹಲವಾರು ಸ್ಪರ್ಧೆ ಗಳನ್ನು ನಡೆಸಲಾಯಿತು.