ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ. 21ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿ. ಮತ್ತು ಕೆವಿಜಿ ಐಪಿಎಸ್ ನ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆಯವರು ಶುಭಹಾರೈಸಿ ಯೋಗ ಕಾರ್ಯಕ್ರಮವು ಯಶಸ್ವಿಯಾಗಲಿ. ಯೋಗಾಭ್ಯಾಸವು ನಿರಂತರವಾಗಿ ನಡೆದುಕೊಂಡು ಬರಲಿ ಎಂದು ಹೇಳಿದರು. ಹತ್ತನೇ ತರಗತಿಯ ವಿದ್ಯಾರ್ಥಿನಿ ಹಿತಾಶ್ರೀ ಸ್ವಾಗತಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಭವಾನಿ ಶಂಕರ್ ಅಡ್ತಲೆ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹತ್ತನೇ ತರಗತಿಯ ವಿದ್ಯಾರ್ಥಿ ಹೀತೇಶ್ ನಮ್ಮ ಜೀವನದಲ್ಲಿ ಯೋಗದ ಪ್ರಾಮುಖ್ಯತೆ ಹಾಗೂ ಅದರಲ್ಲಿ ಅಡಗಿರುವ ಆರೋಗ್ಯದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲಾ ದೈಹಿಕ ಶಿಕ್ಷಕಿ ಶ್ರೀಮತಿ ಸುಪ್ರಿಯಾ ವಿದ್ಯಾರ್ಥಿಗಳಿಗೆ ಯೋಗದ ಶ್ಲೋಕಗಳನ್ನು ತಿಳಿಸಿಕೊಟ್ಟು ಆಸನಗಳನ್ನು ಪ್ರದರ್ಶಿಸಿದರು.
ಹತ್ತನೇ ತರಗತಿಯ ತನ್ವಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕೆವಿಜಿ ಐಪಿಎಸ್ ನ ಆಡಳಿತ ಮಂಡಳಿ ಸದಸ್ಯ ಭವಾನಿಶಂಕರ್ ರನ್ನು ಪರಿಚಯಿಸಿದರು. ಭವಾನಿಶಂಕರ ಅಡ್ತಲೆಯವರು ಮಾತನಾಡಿ ‘ಯೋಗ ಎಂದರೆ ದೈಹಿಕ ಶುಚಿತ್ವ. ಇದು ಧ್ಯಾನದ ಮೂಲಕ ಹುಟ್ಟಿರುವಂತದ್ದು. ಇಂದು ನಾವು ನಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು. ಅಷ್ಟಾಂಗ ಯೋಗಗಳು ನಮ್ಮ ದೇಹ, ಆರೋಗ್ಯವನ್ನು ಪರಿಶುದ್ಧವಾಗಿಡುತ್ತದೆ. ಭಾರತೀಯ ಪರಂಪರೆಯಿಂದ ಹುಟ್ಟಿಕೊಂಡ ಯೋಗವನ್ನು ಮಕ್ಕಳೆಲ್ಲರೂ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ಹೇಳಿ, ಆಡಳಿತ ಮಂಡಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಬಳಿಕ ಮಾತನಾಡಿದ ಶಾಲಾ ಪ್ರಾಂಶುಪಾಲರಾದ ಅರುಣ್ ಕುಮಾರ್ ‘ ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಪ್ರತಿನಿತ್ಯದ ಯೋಗಾಭ್ಯಾಸದಿಂದ ವಿದ್ಯಾರ್ಥಿಗಳಿಗೆ ತಮ್ಮ ಕಲಿಕೆಯಲ್ಲಿ ಏಕಾಗ್ರತೆ ದೊರೆಯುತ್ತದೆ ಎಂದು ಹೇಳಿದರು. ಹತ್ತನೇ ತರಗತಿ ವಿದ್ಯಾರ್ಥಿಗಳಾದ ರಿಷಭ್ ಮತ್ತು ದೃಷಾ ಪಾನಾತ್ತಿಲ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಶಿಲ್ಪ ಬಿದ್ದಪ್ಪ, ಕೆವಿಜಿ ಎಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಕರಾದ ಭಾಸ್ಕರ್, ಐಪಿಎಸ್ ನ ದೈಹಿಕ ಶಿಕ್ಷಕರಾದ ತೀರ್ಥವರ್ಣ ಹಾಗೂ ಸುಪ್ರಿಯ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಹತ್ತನೇ ತರಗತಿ ವಿದ್ಯಾರ್ಥಿನಿ ಕು. ರಿತಿ ಆಳ್ವ ವಂದಿಸಿದರು.
ಬಳಿಕ ಶಾಲಾ ಆವರಣದಲ್ಲಿ ಎಲ್ಲಾ ಮಕ್ಕಳಿಗೂ ದೈಹಿಕ ಶಿಕ್ಷಕರಾದ ತೀರ್ಥವರ್ಣ, ಶ್ರೀಮತಿ ಸುಪ್ರಿಯ ಮತ್ತು ಪ್ಲೇ ಹೋಂ ನ ಶಿಕ್ಷಕಿಯಾಗಿರುವ ಹೇಮಲತಾ ವೈಲಾಯರವರು ಯೋಗಾಸನಗಳನ್ನು ಮಾಡಿಸಿದರು.