ಆಲೆಟ್ಟಿ ಗ್ರಾಮದ ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
8 ನೇ ವರ್ಷದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಜೂ.21 ರಂದು ಹಮ್ಮಿಕೊಳ್ಳಲಾಯಿತು. ಸ್ಥಳೀಯ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜ,ಎಸ್.ಡಿ.ಎಂ.ಸಿ ಅಧ್ಯಕ್ಷ ಕರುಣಾಕರ ದೋಣಿಮೂಲೆ, ಆರೋಗ್ಯ ಸಹಾಯಕಿ ಶ್ರೀಮತಿ ನಮಿತ ಕಲ್ಲಪಳ್ಳಿ,ಆಶಾ ಕಾರ್ಯಕರ್ತೆ ಸಿ.ಕೆ ಸರಸ್ವತಿ ಬಡ್ಡಡ್ಕ, ಶಾಲಾ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಬಾಗವಹಿಸಿದರು.
ಶಾಲಾ ಸಹ ಶಿಕ್ಷಕ ಮಾರುತಿ ಬಸ್ಯಾ ನಾಯ್ಕರ್ ಮತ್ತು ನಮಿತ ರವರು ಯೋಗ ತರಬೇತಿ ನೀಡಿದರು. ನಿವೃತ್ತ ಮುಖ್ಯ ಶಿಕ್ಷಕಿ ಯಶೋಧ ಗುಂಡ್ಯ ಯೋಗದ ಮಹತ್ವದ ಬಗ್ಗೆ ತಿಳಿಸಿದರು. ಮುಖ್ಯ ಶಿಕ್ಷಕ ರಾಧಾಕೃಷ್ಣ ಕೆ ವಂದಿಸಿದರು.ಶಿಕ್ಷಕಿಯರಾದ ಶ್ರೀಮತಿ ನವ್ಯ ಎಚ್. ಎಂ,ಶ್ರೀಮತಿ ವನಿತಾ ಪಿ.ಕೆ, ಕು. ಪ್ರೇಮಾಂಜಲಿ ಆರ್ ಸಹಕರಿಸಿದರು.