ಆರೋಗ್ಯ ಭಾರತಿ ಇದರ ವತಿಯಿಂದ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ‘ಯೋಗ ಮತ್ತು ಆರೋಗ್ಯ ಮಾಹಿತಿ ‘ ಕಾರ್ಯಕ್ರಮವನ್ನು ಜೂ.15 ರಂದು ನಡೆಯಿತು. ಗಣೇಶ ಭಟ್ ಇವರು ತಮ್ಮ ಸ್ವಯಂ ಸೇವಾ ಸಂಸ್ಥೆಯಾದ ‘ ಆರೋಗ್ಯ ಭಾರತಿ ‘ ಯ ಬಗ್ಗೆ ಪರಿಚಯಿಸಿದರು.
“ಯೋಗ ಮತ್ತು ಆರೋಗ್ಯದ ” ಬಗ್ಗೆ ಆಯುರ್ವೇದ ಮತ್ತು ಯೋಗ ತಜ್ಞರಾಗಿರುವ ಡಾ. ಚೇತನಾ ಗಣೇಶ ಇವರು ಮಾತನಾಡಿ ಯೋಗವನ್ನು ಪ್ರಾರಂಭಿಸುವ ಮೊದಲು ವ್ಯಕ್ತಿ ಅನುಸರಿಸಬೇಕಾದ ಅಂಶಗಳು, ಯೋಗ ಮತ್ತು ವ್ಯಾಯಾಮದ ನಡುವಿನ ವ್ಯತ್ಯಾಸ , ಸರಳ ಮತ್ತು ಮಿತ ಆಹಾರ ಪದ್ದತಿಯ ಒಳಿತುಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಿದರು. ಮತ್ತು ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿಯೇ ಯೋಗಾಭ್ಯಾಸ ರೂಢಿಸಿಕೊಳ್ಳುವುದರ ಮೂಲಕ ತಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಹೇಗೆ ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗಬಹುದು ಎನ್ನುವುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ನಿರ್ದೇಶಕರಾದ ಮಹಾವೀರ್ ಜೈನ್, ಶಾಲಾಮುಖ್ಯೋಪಾಧ್ಯಾಯರಾದ ಗದಾಧರ್ ಬಾಳುಗೋಡು, ಬೋಧಕ ವರ್ಗ , ವಿದ್ಯಾರ್ಥಿ ವೃಂದ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.