ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಅವರು ತನ್ನ ೭೫ನೇ ಹುಟ್ಟುಹಬ್ಬದ ಪ್ರಯುಕ್ತವಾಗಿ ಸಾರ್ವಜನಿಕರ ಉಪಯೋಗಕ್ಕಾಗಿ ಸುಮಾರು 11 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಬಿಸಿನೀರಿನ ಸರಬರಾಜು ಸಹಿತವಾದ ಸುಸಜ್ಜಿತ ಸ್ನಾನಗಹ ಮತ್ತು ಶೌಚಾಲಯಗಳ ಸಂಕೀರ್ಣವನ್ನು ಸವಣೂರು ಗ್ರಾಮ ಪಂಚಾಯತ್ಗೆ ಹಸ್ತಾಂತರಿಸಲಾಯಿತು.
ವಿದ್ಯಾರಶ್ಮಿ ಸಮೂಹ ಶಿಕ್ಷ ಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿಯವರು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ವಿ. ಶೆಟ್ಟಿ ಮತ್ತು ಅವರ ತಂಡಕ್ಕೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಗಿರಿಶಂಕರ್ ಸುಲಾಯರವರು ಮಾತನಾಡಿ ಸೀತಾರಾಮ ರೈಯವರು ಸುಮಾರು ೩೦ ವರ್ಷಗಳಿಂದ ಸವಣೂರಿನಲ್ಲಿ ಮಾಡಿದ ವಿವಿಧ ಸಾರ್ವಜನಿಕ ಸೇವೆಗಳನ್ನು ಸ್ಮರಿಸಿಕೊಂಡರು. ಇದೀಗ ಅವರು ನೀಡಿರುವ ಸ್ನಾನಗಹ ಮತ್ತು ಶೌಚಾಲಯಗಳ ಸಂಕೀರ್ಣವು ಸ್ವಚ್ಛ ಗ್ರಾಮ ಅಭಿಯಾನಕ್ಕೆ ಸಂಬಂಧಿಸಿದಂತೆ ಅಮೂಲ್ಯ ಮತ್ತು ಗಣನೀಯವಾದ ಕೊಡುಗೆಯಾಗಿದೆ ಎಂದರು. ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ ಇರುವಂತಹ ಸಾರ್ವಜನಿಕ ಸ್ನಾನಗಹ ಈ ಪರಿಸರದಲ್ಲಿ ಇದೇ ಮೊದಲು ಎಂದು ಘಟಕದ ವಿಶೇಷತೆಯನ್ನು ಉಲ್ಲೇಖಿಸಿದ ಅವರು ಸೀತಾರಾಮ ರೈಯವರಲ್ಲಿರುವ ಸ್ವಚ್ಛತೆಯ ಕುರಿತಾದ ಮಾನಸಿಕತೆ ಎಲ್ಲರಿಗೂ ಮಾದರಿಯಾದುದು ಎಂದು ಅವರು ಪ್ರಶಂಸಿಸಿದರು. ಅಶ್ವಿನ್ ಎಲ್. ಶೆಟ್ಟಿಯವರು ಮಾತನಾಡಿ ಸವಣೂರಿಗೆ ಇನ್ನು ಮುಂದೆ ಆಗಬೇಕಾದ ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಪಂಚಾಯತ್ನೊಂದಿಗೆ ಸಹಕರಿಸಲಿವೆ ಎಂದರು. ಸವಣೂರಿನಲ್ಲಿ ಉದ್ಯಾನವನ ಮಾಡುವ ಯೋಜನೆ ಪಂಚಾಯತ್ ಮುಂದಿದ್ದು ಅದಕ್ಕೆ ನಮ್ಮ ಸಂಸ್ಥೆಗಳ ರಾಷ್ಟ್ರೀಯ ಸೇವಾ ಯೋಜನಾ ಘಟಕ ಸಹಕಾರ ನೀಡುತ್ತದೆ ಎಂದು ಘೋಷಿಸಿದರು.
ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶೀನಪ್ಪ ಶೆಟ್ಟಿ, ನೆಕ್ರಾಜೆ,ಸದಸ್ಯರಾದ ರಫೀಕ್ ಎಂ.ಎ., ಸತೀಶ್ ಆಂಗಡಿಮೂಲೆ,ಭರತ್ ರೈ ,ತೀರ್ಥರಾಮ ಕೆಡೆಂಜಿ,ಸುಂದರಿ,ಗ್ರಾಮ ಪಂಚಾಯತ್ ಅಭಿವದ್ಧಿ ಅಧಿಕಾರಿ ಮನ್ಮಥ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.