ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಲೆಕ್ಕಪತ್ರ ವಿಭಾಗ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಗಾರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಅಕಾಡೆಮಿಆಫ್ ಲಿಬರಲ್‌ಎಜ್ಯುಕೇಶನ್ (ರಿ) ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿಯವರ ಅಡಳಿತದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳ ಲೆಕ್ಕ ಪತ್ರ ವಿಭಾಗದ ಸಿಬ್ಬಂದಿಗಳಿಗೆ ವಿಶೇಷ ತರಬೇತಿಕಾರ್ಯಗಾರವು ಜೂ. ೨೨ ರಂದು ಕೆ.ವಿ.ಜಿ ಐ.ಪಿ.ಎಸ್‌ನ ಸಭಾಂಗಣದಲ್ಲಿ ನಡೆಯಿತು.


ಕಾರ್ಯಗಾರವನ್ನು ಉದ್ಘಾಟಿಸಿದ ಅಕಾಡೆಮಿಆಫ್ ಲಿಬರಲ್‌ಎಜ್ಯುಕೇಶನದ (ರಿ) ಇದರ ಪ್ರಧಾನಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿಯವರುಒಂದು ಸಂಸ್ಥೆಯ ಬೆಳವಣಿಗೆಗೆ ಆರ್ಥಿಕ ಶಿಸ್ತು ಅತ್ಯಂತ ಮುಖ್ಯ. ಆಧುನಿಕ ವ್ಯವಸ್ಥೆಯಲ್ಲಿ ನೂತನತಂತ್ರಜ್ಞಾನದೊಂದಿಗೆ ಲೆಕ್ಕಪತ್ರ ವಿಭಾಗವನ್ನು ಅತ್ಯಂತ ಪರಿಣಾಮಕಾರಿಯಾಗಿ ಮುಂದುವರಿಸಬೇಕು ಮತ್ತು ಪ್ರತಿಯೊಬ್ಬ ಸಿಬ್ಬಂದಿಯು ತನ್ನನ್ನು ತಾನು ನಿಷ್ಠೆಯಿಂದ ತೊಡಗಿಸಿಕೊಂಡಾಗ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿದ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಸಲಹೆಗಾರರಾದ ಡಾ. ಉಜ್ವಲ್‌ಊರುಬೈಲು ಮತಾನಾಡಿ ನಮ್ಮ ಶಿಕ್ಷಣ ಸಂಸ್ಥೆಗಳು ಪರಿಣಾಮಕಾರಿಯಾಗಿ ಮುನ್ನಡೆಯಲು ಮತ್ತು ಸಮಾಜದಲ್ಲಿ ಗುರುತಿಸಿಕೊಳ್ಳುವಲ್ಲಿ ಲೆಕ್ಕಪತ್ರ ವಿಭಾಗದಸಿಬ್ಬಂದಿಗಳ ನಿಸ್ವಾರ್ಥ ಮತ್ತುತ್ಯಾಗಭರಿತ ಕೆಲಸಗಳೇ ಕಾರಣಆದುದರಿಂದಎಲ್ಲಾ ಸಿಬ್ಬಂದಿಗಳು ಅತ್ಯಂತ ಶಿಸ್ತು ಮತ್ತುನಿಷ್ಠೆಯಿಂದಕೆಲಸ ಮಾಡಬೇಕುಎಂದರು. ಅಲ್ಲದೇ ಸಂಸ್ಥೆಗಳ ಏಳಿಗೆಯು ಲೆಕ್ಕಪತ್ರ ವಿಭಾಗದ ಸಿಬ್ಬಂದಿಗಳ ಕೆಲಸದಆಧಾರದ ಮೇಲೆ ನಿರ್ಧಾರವಾಗುತ್ತದೆ ಮತ್ತು ಸಿಬ್ಬಂದಿಗಳ ಕಾರ್ಯಕ್ಷಮತೆಯು ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಸಲಹೆ ಸೂಚನೆಯನಿತ್ತು ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖ ತರಬೇತುದಾರರಾದ ಪುತ್ತೂರಿನ ಲೆಕ್ಕಪರಿಶೋಧಕ ಸನತ್ ಅವರು ಪ್ರಸಕ್ತ ಸಮಯದಲ್ಲಿ ಲೆಕ್ಕಪತ್ರ ವಿಭಾಗದಲ್ಲಿಆದ ಬದಲಾವಣೆಯ ಬಗ್ಗೆ ಪ್ರಯೋಗಿಕ ಮತ್ತು ಥಿಯರಿಯ ಮೂಲಕ ಸವಿಸ್ತಾರವಾಗಿ ವಿವರಿಸಿದರು. ನಂತರಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಲೆಕ್ಕಪತ್ರದ ವಿಭಾಗದ ಅಧೀಕ್ಷರಾದ ಪದ್ಮನಾಭ ಕಾನವುಜಾಲು ಉಪಸ್ಥಿತರಿದ್ದರು. ಕಾರ್ಯಕಾರದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಸುಮಾರು ೩೦ ಮಂದಿ ಸಿಬ್ಬಂದಿಗಳು ಭಾಗವಹಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.