ಆರೋಗ್ಯ ಸೇವೆಯ ಹೊಸ ಹೆಜ್ಜೆ : ಡಾ. ರೇಣುಕಾ ಪ್ರಸಾದ್ ಶ್ಲಾಘನೆ
ಪೈಚಾರಿನ ಬಿ.ಎಂ. ಕಾಂಪ್ಲೆಕ್ಸ್ನ ಮೆಡ್ಸಿಟಿ ಮೆಡಿಕಲ್ ಮೇಲ್ಭಾಗದಲ್ಲಿ ಸಿಟಿ ಕ್ಲಿನಿಕ್ ಇಂದು ಶುಭಾರಂಭಗೊಂಡಿತು.
ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ. ರೇಣುಕಾಪ್ರಸಾದ್ ಕ್ಲಿನಿಕನ್ನು ಉದ್ಘಾಟಿಸಿದರು. ಆರೋಗ್ಯ ಸೇವೆಯಲ್ಲಿ ಹೊಸ ಹೆಜ್ಜೆಯಾಗಿ ಆರಂಭಗೊಂಡಿರುವ ಸಿಟಿ ಕ್ಲಿನಿಕ್ ಉತ್ತಮ ಸೇವೆ ಒದಗಿಸಲಿ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್, ಬಿ.ಎಂ.ಕಾಂಪ್ಲೆಕ್ಸ್ ಕಟ್ಟಡದ ಮಾಲಕ ರಫೀಕ್ ಪೈಚಾರ್, ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ಕೆರೆ, ಸುಳ್ಯ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪ್ರಭಾಕರ, ಪಂಜ ಪಂಚಶ್ರೀ ಜೇಸಿಐ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು, ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಪೈಚಾರ್, ಪೈಚಾರ್ ಕಾರುಣ್ಯ ಟ್ರಸ್ಟ್ ಅಧ್ಯಕ್ಷ ಡಾ. ಆರ್.ಬಿ.ಬಶೀರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಗುತ್ತಿಗಾರು ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಸೀನಿಯರ್ ಮಾರ್ಕೆಟಿಂಗ್ ಆಫೀಸರ್ ಮನಮೋಹನ ದೇವ, ಕ್ಲಿನಿಕ್ ನ ವೈದ್ಯ ಡಾ. ಗೋಪಾಲಕೃಷ್ಣ ಎನ್. ನಾಯಕ್ , ಭಾರತೀಯ ವೈದ್ಯಕೀಯ ಸಂಘ ಸುಳ್ಯ ಶಾಖೆಯ ಅಧ್ಯಕ್ಷೆ ಡಾ. ವೀಣಾ, ಸಿಟಿ ಕ್ಲಿನಿಕ್ ನ ಮಾಲಕರಾದ ದುರ್ಗಾದಾಸ್ ಕಡ್ಲಾರು, ಮೆಡ್ ಸಿಟಿ ಮೆಡಿಕಲ್ಸ್ ಮಾಲಕಿ ಪವಿತ್ರಾಕ್ಷಿ ಕಡ್ಲಾರು, ರಾಮಣ್ಣ ಗೌಡ ಕಡ್ಲಾರು, ಅನಿತಾ ಸತೀಶ್ ಕಡ್ಲಾರು ಉಪಸ್ಥಿತರಿದ್ದರು.
ದುರ್ಗಾದಾಸ್ ಕಡ್ಲಾರು ಸ್ವಾಗತಿಸಿ ವಂದಿಸಿದರು. ಸೋಮಶೇಖರ ನೇರಳ ಕಾರ್ಯಕ್ರಮ ನಿರೂಪಿಸಿದರು.
ಸಿಟಿ ಕ್ಲಿನಿಕ್ನಲ್ಲಿ ಪ್ರತಿ ಆದಿತ್ಯವಾರ ಅಪರಾಹ್ನ 2.30 ರಿಂದ 4.30ರವರೆಗೆ ಮಂಗಳೂರು ಕಣಚ್ಚೂರು ಆಸ್ಪತ್ರೆಯ ಡಾ.ನರಸಿಂಹ ಶಾಸ್ತ್ರಿ ಜಿ. ಹಾಗೂ ಪ್ರತಿದಿನ ಸಂಜೆ 5.30ರಿಂದ ರಾತ್ರಿ 8ರವರೆಗೆ ಡಾ. ಗೋಪಾಲಕೃಷ್ಣ ನಾಯಕ್ ಲಭ್ಯರಿರುತ್ತಾರೆ. ಕೆ.ಎಂ.ಸಿ.ಆಸ್ಪತ್ರೆ ಮಂಗಳೂರು ಇವರ ವತಿಯಿಂದ ಇಸಿಜಿ ಸೌಲಭ್ಯ ದೊರೆಯಲಿದೆ.