ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್ತಿನ ಸದಸ್ಯರಾಗಿ ಪೆರುವಾಜೆ ಸಚಿನ್ ರಾಜ್ ಶೆಟ್ಟಿ ಅವರನ್ನು ರಾಜ್ಯಪಾಲರ ಆದೇಶಾನುಸಾರ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ನೇಮಕಗೊಳಿಸಿ ಆದೇಶ ಮಾಡಿರುತ್ತಾರೆ.
ಜಿಲ್ಲಾಧಿಕಾರಿ ಅವರು
ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ತಿನ ಅಧ್ಯಕ್ಷ ರಾಗಿರುತ್ತಾರೆ .
ಸಚಿನ್ ರಾಜ್ ಶೆಟ್ಟಿ ಅವರು ಈ ಹಿಂದೆ ಇದೇ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ. ಪ್ರಸ್ತುತ ಸಚಿನ್ ರಾಜ್ ಶೆಟ್ಟಿ ಅವರು ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ.