ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಅಮೃತ ಗೊಂಚಲು ಸಭೆಯನ್ನು ಜೂ.22 ರಂದು ನಡೆಸಲಾಯಿತು.
ಅಧ್ಯಕ್ಷತೆಯನ್ನು ಶ್ರೀಮತಿ ಹಷಿ೯ಣಿಯವರು ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೊಲ್ಲಮೊಗ್ರು ವಲಯದ ಮೇಲ್ವಿಚಾರಕಾರದ ಶ್ರೀಮತಿ ವಿಜಯ ರವರು ಪ್ರಸ್ತಾವಿಕವಾಗಿ ಮಾತನಾಡಿದರು ಐನೆಕಿದು ಸ್ತ್ರೀ ಶಕ್ತಿ ಗುಂಪಿನ ಸದಸ್ಯರಾದ ಶ್ರೀಮತಿ ಮೋಹಿನಿಯವರು ಅಸೌಖ್ಯದಿಂದ ನಿದನ ಹೊಂದಿದ ಕಾರಣ ಅವರ ಮನೆಯವರಿಗೆ ಗೊಂಚಲು ಗುಂಪಿನಿಂದ ಪರಿಹಾರ ಧನವನ್ನು ಮೇಲ್ವಿಚಾರಕರಾದ ಶ್ರೀಮತಿ ವಿಜಯರವರ ಮುಖಾಂತರ ನೀಡಲಾಯಿತು ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನೇತ್ರಾವತಿ, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ನಿಮ೯ಲರವರು ಪ್ರಾಥ೯ನೆ ಮಾಡಿದರು ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಹರಿಣಿ ನಿರೂಪಿಸಿ ಸ್ವಾಗತಿಸಿದರು ಶ್ರೀಮತಿ ಅನಂತೇಶ್ವರಿ ವಂದಿಸಿದರು.