Breaking News

ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಮಂತ್ರಿಮಂಡಲ ರಚನೆಗೆ ಚುನಾವಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಮಂತ್ರಿಮಂಡಲ ರಚನೆಗೆ ಶಾಲಾ ಸಂಸತ್ ಚುನಾವಣೆಯನ್ನು ಜೂ. 22ರಂದು ನಡೆಸಲಾಯಿತು. ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿಗಳಾದ ಡಾ.ರೇಣುಕಾ ಪ್ರಸಾದ್ ಕೆ.ವಿ ರವರು ಶಾಲೆಗಳಲ್ಲಿ ಚುನಾವಣೆ ನಡೆಸುವುದರಿಂದ ಎಳವೆಯಿಂದಲೇ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡುತ್ತದೆ ಎಂದು ತಿಳಿಸಿದರು.

ಮತದಾನದ ಆರಂಭದಲ್ಲಿ ಶಾಲಾ ಪ್ರಾಂಶುಪಾಲರಾದ ಅರುಣ್ ಕುಮಾರ್ ‘ ವಿದ್ಯುನ್ಮಾನ ಯಂತ್ರದ ಮೂಲಕ ಮತ ಚಲಾಯಿಸುವುದು ಹೇಗೆ ಎಂಬುದರ ಬಗ್ಗೆ ನೀಡಿದರು.
ಎಂಟರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಮತ ಚಲಾಯಿಸಿದರು. ಚುನಾವಣಾ ಆಯುಕ್ತರಾಗಿ ಶಿಕ್ಷಕಿಯರಾದ ಕು. ಪಲ್ಲವಿ, ಶ್ರೀಮತಿ ರೋಹಿಣಿ, ಶ್ರೀಮತಿ ಸುಜಾತ, ಶ್ರೀಮತಿ ಕೀರ್ತನ, ಶ್ರೀಮತಿ ಭವ್ಯ. ಎ, ಶ್ರೀಮತಿ ಜ್ಯೋತ್ಸ್ನಾ, ಶ್ರೀಮತಿ ಚೈತ್ರ ಮತ್ತು ಶ್ರೀಮತಿ ರೇಣುಕಾ ಇವರು ಕಾರ್ಯನಿರ್ವಹಿಸಿದರು. 9ನೇ ತರಗತಿಯ ಅರುಂಧತಿ ಅವರನ್ನು ಚುನಾವಣಾ ಅಧಿಕಾರಿಯಾಗಿ ಮತ್ತು ಮತಗಟ್ಟೆಯ ಅಧಿಕಾರಿಯಾಗಿ ಲಾಸ್ಯ ಮತ್ತು ಶಾಮಿಕ್ ರವರು ಕಾರ್ಯನಿರ್ವಹಿಸಿದರು. ಈ ಶಾಲಾ ಸಂಸತ್ತು ಚುನಾವಣೆಯಿಂದ ವಿದ್ಯಾರ್ಥಿಗಳಿಗೆ ಸಾರ್ವತ್ರಿಕ ಚುನಾವಣೆ ಹೇಗಿರುತ್ತದೆ? ಮತಗಟ್ಟೆಯ ಅಧಿಕಾರಿಗಳ ಕರ್ತವ್ಯಗಳೇನು? ನಮೂದಿತ ಉಮೇದುವಾರರ ಹೆಸರಿನ ಮುಂದೆ ತಪ್ಪಾಗದಂತೆ ಮುದ್ರೆ ಒತ್ತುವುದು ಹೇಗೆ? ಮತದಾನ ಮಾಡಿದ ಮತದಾರರ ಕೈಬೆರಳಿಗೆ ಗುರುತು ಹಾಕುವುದು ಏಕೆ? ಇತ್ಯಾದಿ ಹಲವು ಪ್ರಶ್ನೆಗಳಿಗೆ ಇಂದು ಮಕ್ಕಳು ಸ್ವತ: ಮತಚಲಾಯಿಸಿ ಉತ್ತರ ಪಡೆದರು. ಅದೇ ದಿನ ಮಧ್ಯಾಹ್ನ 3 ಗಂಟೆಗೆ ಮತ ಎಣಿಕೆ ಕಾರ್ಯ ನಡೆದು ಗರಿಷ್ಠ ಮತ ಪಡೆದ 12 ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಕುರಿತು ಕೆವಿಜಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿಯಾದ ಡಾ.ಉಜ್ವಲ್ ಯು. ಜೆ ಅವರು ‘ ದೇಶದಾದ್ಯಂತ ನಡೆಯುವ ಚುನಾವಣಾ ಸಂದರ್ಭದಲ್ಲಿ ಮತದಾನ ಜಾಗೃತಿ ತಂಡ ಇರುವಂತೆಯೇ ಶಾಲಾ ಮಟ್ಟದಲ್ಲಿಯೂ ಮಕ್ಕಳಿಗೆ ಮತದಾನದ ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವ ಶಿಕ್ಷಕರ ಕಾರ್ಯವೈಖರಿ ಮೆಚ್ಚುವಂತದ್ದು ‘ ಎಂದು ನುಡಿದರು. ಅಂತಿಮವಾಗಿ ಶಾಲಾ ಉಪಪ್ರಾಂಶುಪಾಲರಾದ ಶಿಲ್ಪ ಬಿದ್ದಪ್ಪ ಪ್ರಮಾಣವಚನ ಸ್ವೀಕಾರ ಸಮಾರಂಭ ಜೂ. 29ರಂದು ನಡೆಯಲಿರುವುದಾಗಿ ತಿಳಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.