ದಾನಿಗಳ ನೆರವಿನಿಂದ ಮುರಿದು ಬೀಳುವ ಹಂತದಲ್ಲಿದ್ದ ಮನೆಯ ಮಾಡನ್ನು ದುರಸ್ತಿ ಪಡಿಸುವ ಕಾರ್ಯ ನಡೆಯಿತು.
ಆಲೆಟ್ಟಿ ಗ್ರಾಮದ ಸರಳಿಕುಂಜ ದಿ. ಕೃಷ್ಣ ನಾಯ್ಕರವರ ಪತ್ನಿ ಲಕ್ಷ್ಮಿ ಎಂಬವರ ಮನೆಯು ಮುರಿದು ಬೀಳುವ ಹಂತದಲ್ಲಿತ್ತು. ಸರಳಿಕುಂಜದ ಗಣೇಶ್ ಇಂಡಸ್ಟ್ರೀಸ್ನ ಮಾಲಕ ಜಗದೀಶ್ ಸರಳಿಕುಂಜರವರ ನೇತೃತ್ವದಲ್ಲಿ ಮನೆಯ ಮಾಡನ್ನು ಸಂಪೂರ್ಣ ತೆಗೆದು ದುರಸ್ತಿ ಮಾಡಿಕೊಡಲಾಯಿತು. ಇವರೊಂದಿಗೆ ಮರಾಠಿ ಸಂಘ, ಅರಂಬೂರು ಫ್ಲೈವುಡ್ ಮಾಲಕ ಕೃಷ್ಣ ಕಾಮತ್, ಸಂಪಾಜೆ ಕುಂದಲಕಾಡು ನಾರಾಯಣ ಭಟ್, ಗ್ರಾ.ಪಂ. ಆಲೆಟ್ಟಿ ಮತ್ತು ಇತರರ ಸಹಯೋಗದೊಂದಿಗೆ ಮನೆ ದುರಸ್ತಿಗೊಳಿಸಲಾಯಿತು.