ದೃಶ್ಯ ಸಿಸಿ ಕ್ಯಾಮರಾದಲ್ಲಿ ಪತ್ತೆ
ದ್ವಿಚಕ್ರ ವಾಹನದಲ್ಲಿ ಇರಿಸಿದ್ದ ರೈನ್ ಕೋಟ್ ನ್ನು ವ್ಯಕ್ತಿಯೋರ್ವ ಕಳವುಗೈದ ಘಟನೆ ನಿನ್ನೆ ಕಲ್ಲುಗುಂಡಿಯಿಂದ ವರದಿಯಾಗಿದೆ. ಕಳ್ಳತನದ ಈ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.
ಸುಳ್ಯ ಕಲ್ಲುಗುಂಡಿ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಗ್ರಾಹಕರೋರ್ವರು ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ ಮಳೆಗೆ ಧರಿಸುವ ರೈನ್ ಕೋಟ್ ನ್ನು ವಾಹನದ ಮೇಲೆ ಇರಿಸಿ ಎಟಿಎಂಗೆ ಹೋಗಿದ್ದರು ಎನ್ನಲಾಗಿದೆ.
ಬ್ಯಾಂಕಿನ ವ್ಯವಹಾರ ಮುಗಿಸಿ ಹೊರಬಂದು ನೋಡಿದಾಗ ಗ್ರಾಹಕರು ತಮ್ಮ ದ್ವಿಚಕ್ರ ವಾಹನದ ಮೇಲೆ ಇರಿಸಿ ಹೋಗಿದ್ದ ರೈನ್ ಕೋಟ್ ನಾಪತ್ತೆಯಾಗಿತ್ತು.
ಕೂಡಲೇ ಅವರು ಬ್ಯಾಂಕಿಗೆ ತೆರಳಿ ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದಾಗ ಅಪರಿಚಿತ ವ್ಯಕ್ತಿಯೋರ್ವರು ದ್ವಿಚಕ್ರ ವಾಹನದ ಮೇಲೆ ಇರಿಸಿದ್ದ ಜಾಕೆಟ್ ಕಳ್ಳತನ ಮಾಡಿಕೊಂಡು ಹೋಗುವ ದೃಶ್ಯ ಸೆರೆಯಾಗಿದೆ.
ರೈನ್ ಕೋಟ್ ಕಾಣೆಯಾಗಿರುವ ವ್ಯಕ್ತಿ ಸುದ್ದಿಗೆ ಮಾಹಿತಿಯನ್ನು ನೀಡಿ ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಕಳೆದ ಒಂದು ವಾರ ಮೊದಲು ಸಾವಿರದ ಇನ್ನೂರು ರೂಪಾಯಿಗಳ ಬೆಲೆ ಇರುವ ಜೀಲ್ ಕಂಪನಿಯ ರೈನ್ ಕೋಟ್ ಅನ್ನು ಖರೀದಿಸಿದ್ದು, ಒಂದು ವಾರ ಉಪಯೋಗಿಸುವ ಮೊದಲೇ ಈ ರೀತಿ ಕಳ್ಳತನವಾಗಿದೆ ಎಂದು ಹೇಳಿದ್ದಾರೆ.