ಸುಳ್ಯದ ಸೈಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಜೂನ್ 23 ರಿಂದ ೨೫ರವರೆಗೆ ನಡೆಯುವ ಗಣಿತ ಕಾರ್ಯಗಾರದ ಉದ್ಘಾಟನೆಯನ್ನು ಶಾಲಾ ಸಂಚಾಲಕರಾದ ರೆ. ಫಾ ವಿಕ್ಟರ್ ಡಿಸೋಜ ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಬಿನೋಮಾ ಉಪಸ್ಥಿತರಿದ್ದರು.
ಚಟುವಟಿಕೆಗಳ ಮೂಲಕ ಸಂಪನ್ಮೂಲ ವ್ಯಕ್ತಿ ಸತ್ಯಮೂರ್ತಿ ಹೆಬ್ಬಾರ್ ಪುತ್ತೂರು ಇವರಿಂದ ಗಣಿತ ಕಾರ್ಯಗಾರ ನಡೆಯುತ್ತದೆ. ಗಣಿತ ಶಿಕ್ಷಕಿಯರಾದ ಚೇತನ ಹಾಗೂ ಜ್ಯೋತಿ ಜೆ ರೈ ಸಹಕರಿಸಿದರು.