ಸುಳ್ಯ ತಾಲೂಕು ಮೊಬೈಲ್ ರೀಟೇಲರ್ ಅಸೋಶಿಯೇಶನ್ ವತಿಯಿಂದ ಸುಳ್ಯ ಸಾಂದೀಪ್ ಶಾಲೆಗೆ ಭೇಟಿ ನೀಡುವ ಕಾರ್ಯಕ್ರಮ ಇಂದು ನಡೆಯಿತು.
ಅಸೋಸಿಯೇಷನ್ ಅಧ್ಯಕ್ಷ ಪದಾಧಿಕಾರಿಗಳನ್ನು ಎಂಬಿ ಫೌಂಡೇಶನ್ ಅಧ್ಯಕ್ಷ ಎಂಬಿ ಸದಾಶಿವ, ಶಾಲಾ ಪ್ರಾಂಶುಪಾಲೆ ಹರಿಣಿ ಸದಾಶಿವ ಸ್ವಾಗತಿಸಿ ಬರಮಾಡಿಕೊಂಡರು. ನಂತರ ನೂತನವಾಗಿ ನಿರ್ಮಾಣಗೊಂಡಿರುವ ಶಾಲಾ ಕಟ್ಟಡವನ್ನು ಅಸೋಸಿಯೇಷನ್ ನ ಪದಾಧಿಕಾರಿಗಳು ವೀಕ್ಷಣೆ ನಡೆಸಿದರು.
ನಂತರ ಶಾಲಾ ವಿದ್ಯಾರ್ಥಿಗಳೊಂದಿಗೆ ಬೆರೆತ ಅವರು ಶಾಲಾ ನಿರ್ಮಾಣದಲ್ಲಿ ಮುಖ್ಯ ಪಾತ್ರವಹಿಸಿರುವ ಸಂಸ್ಥೆಯ ಅಧ್ಯಕ್ಷರನ್ನು ಹಾಗೂ ಶಿಕ್ಷಕರು ಸಿಬ್ಬಂದಿ ವರ್ಗದವರನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ತಮ್ಮ ಅಸೋಸಿಯೇಷನ್ ವತಿಯಿಂದ ಸಾಂದೀಪ್ ಶಾಲೆಗೆ ಸಹಾಯ ಹಸ್ತವನ್ನು ನೀಡುವುದಾಗಿ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಶೈಲೇಂದ್ರ ಸರಳಾಯ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಸಮಿತಿಯ ಅಧ್ಯಕ್ಷ ಶಬ್ಬೀರ್ ಎಂಕೆ, ಕಾರ್ಯದರ್ಶಿ ಕಿರಣ್ ಸ್ವಸ್ತಿಕ್ ಸಂಘದ ಸದಸ್ಯರುಗಳಾದ ಸಿಯಾಬ್ ಕಟ್ಟೇಕರ್, ಅಬ್ದುಲ್ ರಹಿಮಾನ್ ಎಸ್ ವೈ ಜಯನಗರ, ಮೊದಲಾದವರು ಉಪಸ್ಥಿತರಿದ್ದರು.
ಎಂಬಿ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಪ್ರಾಂಶುಪಾಲೆ ಹರಿಣಿ ಸದಾಶಿವ ವಂದಿಸಿದರು.