ಮಾತೃ ವಾತ್ಸಲ್ಯದ ಶಂಕರಿ ಅಮ್ಮ ಮತ್ತೆ ಹುಟ್ಟಿಬರಲಿ
✍️ ಕಿಶೋರ್ ಅರಂಪಾಡಿ
1970 ರಿಂದ 2000 ಇಸವಿಯ ಒಳಗೆ ಹುಟ್ಟಿದವರಿಗೆ ಶಂಕರಿ ಅಮ್ಮನ ಮುಖ ನೆನಪಿರಬಹುದು. ಈ ಹಿಂದೆ ಸುಬ್ರಹ್ಮಣ್ಯದ ಸ್ಕಂದ ಕೃಪಾ ವಸತಿ ಕಟ್ಟಡ ಆಗುವ ಮುಂಚೆ ಒಂದು ಚಿಕ್ಕ ಹಂಚಿನ ಮಾಡಿನ ಹೋಟೆಲ್ ಇತ್ತು . ಅದರಲ್ಲಿ ಐದಾರು ಮಸಿ ಹಿಡಿದ ಮೇಜು ಕುಚಿ೯. ಆ ಹೋಟೆಲ್ ನ ಕಟ್ಟಿಗೆ ಅಡುಗೆಯ ಹೊಗೆಯ ನಡುವೆ ಒಂದು ಮುಗ್ಧ ನಗುಮುಖದ ಚಿತ್ರ ಅದು ಆ ಅಮ್ಮನದು.
ಅದು ಅಂತಿಂತ ಅಮ್ಮನಲ್ಲ. ಕೊಡುವುದರಲ್ಲಿ ವಿರಾಟ್ ರೂಪ ಅದು. ಅದು ಪ್ರೀತಿ ವಿಶ್ವಾಸಕ್ಕೆ ಬೆಲೆಕೊಡುವ ಕಾಲ, ದುಡ್ಡಿಗಲ್ಲ. ಗಿರಾಕಿಗಳಿಗೆ ಕೂಡ ಇದುವೇ ತಾಜ್ ಮಹಲ್. ಎಷ್ಟೋ ಜನರ ಚಿಕ್ಕಪುಟ್ಟ ಸಮಸ್ಯೆಗಳನ್ನು ಸರಿಮಾಡಿದ ಅಮ್ಮ ಇದು. ಇದು ಹೋಟೆಲ್ ಮಾತ್ರವಲ್ಲ ಅನ್ನಛತ್ರ . ನಾನೂ ಹೋಗುತ್ತಿದ್ದೆ. ಬನ್ಸ್ ಹುಳಿದೋಸೆ ನನ್ನ ಫೇವರೇಟ್. ಗೋಳಿಬಜೆ ಇಡ್ಲಿ ಸಾಂಬಾರು ಎಂಬ ನಾಲ್ಕಾರು ತಿಂಡಿಗಳ ಮೆನು ಅಷ್ಟೇ ಆ ಚಿಕ್ಕ ಹೋಟೆಲ್ ನದ್ದು. ನನ್ನ ಅಪ್ಪನೂ ಬುತ್ತಿ ಇಟ್ಟುಕೊಂಡು ಹೋಗುತ್ತಿದ್ದ ಜಾಗವದು. ಆವಾಗ ಬಸ್ ಸ್ಯಾಂಡ್ ಇರಲಿಲ್ಲಾ.ಆ ಹೋಟೆಲ್ ಕೂಡ ಸಣ್ಣ ಮಟ್ಟಿನ ಬಸ್ ಸ್ಟ್ಯಾಂಡ್ ನ ಹಾಗಿತ್ತು.
ಎಲ್ಲಾ ಜನರ ಮನೆಯ ಕ್ಷೇಮ ಸಮಾಚಾರಕ್ಕೂ ಅಮ್ಮನ ದೇ ಉಸ್ತುವಾರಿ .ದುಡ್ಡು ಕೊಟ್ಟು ಹೋದವರಿಗಿಂತ ದುಡ್ಡು ಕೊಡದೆ ತಿಂದು, ಉಂಡು ಅಲ್ಲಿಹೋದವರೇ ಹೆಚ್ಚು.. ಇಲ್ಲಿ ರಾಜಕೀಯ ಇಲ್ಲ ಪ್ರೀತಿಯ ಊಟ ಮಾತ್ರ ಇಲ್ಲಿ. ವಾಲಗದ ಕೇರಿಯ ಭಟ್ಯ, ರಾಮು, ಜೋಮು ,ಅಂಗಾರು ಗುರುವ, ಐತ. ಇವರ ಪಾಲಿಗೆಲ್ಲ ಇದುವೇ ಸ್ವಿಸ್ ಬ್ಯಾಂಕ್. ಒಂದು ಹೊರೆ ಕಟ್ಟಿಗೆ ತಂದುಕೊಟ್ಟು ದುಡ್ಡು ಅಮ್ಮನ ಕೈಲಿ ಗ್ಯಾರಂಟಿ. ಅದಾದ ನಂತರ ಸ್ಕಂದಬಿಲ್ಡಿಂಗ್ ಬಂತು. ಆದರೂ ಅಲ್ಲೂ ಕೂಡ ಇದೆ ತರಹದ ಅತಿಥ್ಯ. ದೇವಸ್ತಾನದಲ್ಲಿ ಇದ್ದ ಹಾಗೆ ದುಡ್ಡಿಲ್ಲಿದವರಿಗೂ ಇಲ್ಲಿ ಗ್ಯಾರಂಟಿ ಊಟ. ಅಂತಹ ಅಮ್ಮ ಇನ್ನಿಲ್ಲ.. ಇಂತಹ ಮಾತೃ ವಾತ್ಸಲ್ಯದ ಅಮ್ಮ ಇನ್ನೊಮ್ಮೆ ಹುಟ್ಟಿಬರಲಿ … ಎಂದು ಆಶಿಸುತ್ತೇನೆ.
✍️ *ಕಿಶೋರ್ ಅರಂಪಾಡಿ*