Breaking News

ಲೇಖನ : ಅಪ್ಪಾ…

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಅಪ್ಪಾ ನಿಮ್ಮ ಮಗಳಾಗಿ ಜನಿಸಲು ನಾನು ಹೆಮ್ಮೆ ಪಡುತ್ತೇನೆ. ನಿಮ್ಮಲ್ಲಿರುವ ಹೃದಯ ಶ್ರೀಮಂತಿಕೆಗೆ ಸರಿ ಸಾಟಿಯಾಗಿರಲು ಯಾರಿಂದಲೂ ಸಾಧ್ಯವಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಮುಖ್ಯ ಪಾತ್ರವಾಗಿರುವವರು ಅಪ್ಪ. ಅದರಲ್ಲೂ ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ಅಮ್ಮನಿಗಿಂತಲೂ ಹೆಚ್ಚು ಇಷ್ಟ. ಹಾಗೆಯೇ ನನ್ನ ಜೀವನದಲ್ಲಿ ನನಗಿಷ್ಟವಾದವರು ನನ್ನ ಖುಷಿ ಎಲ್ಲವೂ ನನ್ನ ಅಪ್ಪ. ನನ್ನ ನೋವು ನಲಿವುಗಳಲ್ಲೂ ನನ್ನ ಬೆನ್ನೆಲುಬಾಗಿ ನಿಂತವರು ಅಪ್ಪ.

ನಾನು ಚಿಕ್ಕವಳು ಇರುವಾಗಲೇ ನನ್ನನ್ನು ಬೆಳೆಸಲು ತುಂಬಾ ಕಷ್ಟ ಪಟ್ಟಿರುತ್ತಾರೆ. ಹಾಗೆಯೇ ನಾನು ಏನು ಕೇಳಿದರೂ ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದವರೇ ಅಲ್ಲ. ನಮ್ಮಲ್ಲಿ 2 ಹೆಣ್ಣು ,ಒಂದು ಗಂಡು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳಲ್ಲಿ ನಾನು ಎರಡನೆಯವಳು, ಅಪ್ಪನ ಮುದ್ದಿನ ಮಗಳು. ತಾನು ಕಲಿಲಿಲ್ಲ ಎಂದು ನಮ್ಮನ್ನು ಕಷ್ಟ ಪಟ್ಟು ಪದವಿಯವರೆಗೆ ಕಲಿಸಿದ್ದಾರೆ. ಅದಕ್ಕೆ ನಾನು ಖುಷಿ ಪಡುತ್ತೇನೆ. ಶಿಕ್ಷಣ, ಕಲೆ ಎಲ್ಲದಕ್ಕೂ ನಮ್ಮಲ್ಲಿ ಪ್ರೋತ್ಸಾಹ ತುಂಬಿಸಿದವರು ಅಪ್ಪ. ಪದವಿ ಮುಗಿಸಿದ ನಾನು ಕಂಪ್ಯೂಟರ್ ತರಗತಿಯನ್ನು ಒಂದು ವರ್ಷ ಮಾಡಿದೆನು. ಉದ್ಯೋಗಕ್ಕಾಗಿ ಹುಡುಕಾಡಿದೆನು. ಆಗ ಅಪ್ಪನ ಮೊಬೈಲ್‌ಗೆ ಒಂದು ಕರೆ ಬಂದಿತ್ತು. sc ಯಲ್ಲಿ ಒಂದು ಮೀಸಲಾತಿ ಇದೆ. ನಿಮ್ಮ ಮಗಳನ್ನು ರಾಜಕೀಯ ಜೀವನಕ್ಕೆ ಪ್ರೋತ್ಸಾಹಿಸಿ ಎಂದು ಆದರೆ ನಾನು ಆಗುವುದೇ ಇಲ್ಲ ಎಂದಾಗ ನನ್ನ ಅಪ್ಪ ನನಗೆ ಪ್ರೋತ್ಸಾಹಿಸಿ ಒಂದು ಅವಕಾಶ ಎಂದಿಗೂ ಬಿಡಬೇಡ ಎಂದರು. ಅಪ್ಪನ ಮಾತಿಗೆ ಬೆಲೆ ಕೊಟ್ಟು ರಾಜಕೀಯಕ್ಕೆ ಕಾಲಿಟ್ಟೆನು. ಇದರಿಂದ ಅಪ್ಪನಿಗೆ ಖುಷಿಯಾಯಿತು ಎನ್ನುವುದು ಮಾತ್ರ ನನ್ನ ಸಂತೋಷ. ನಂತರ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವಾಗ ನನ್ನ ಅಪ್ಪನ ಮುಖದಲ್ಲಿ ಖುಷಿಯನ್ನು ಹೇಳಲೂ ನನ್ನಿಂದ ಪದಗಳಿಲ್ಲ. ಆದರೆ ಕೇವಲ ಅಷ್ಟೆ ಸೀಮಿತವಾಗಿತ್ತು. ಯಾಕೆಂದರೆ ಅವರು ನನ್ನ ಬದುಕಿನಿಂದ ಮರೆಯಾಗಿರುತ್ತಾರೆ. ಆ ದಿನ ನನಗೆ ದಿಕ್ಕೆ ತೋಚಲಿಲ್ಲ. ಅಪ್ಪ ಇರದ ಬಾಳು ಬೇಕಾಗಿಲ್ಲ ಎಂದು ಅದೆಷ್ಟೂ ಬಾರಿ ನನ್ನ ಕೆಟ್ಟ ಯೋಚನೆಯನ್ನು ಮಾಡಿದ್ದೇನೆ. ಆದರೆ ಅವರು ಹೇಳಿದ ಆ ಮಾತುಗಳು ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿತ್ತು. ಅಪ್ಪ ಇನ್ನು ಮುಂದೆ ನನ್ನ ಜೀವನದಲ್ಲಿ ಇಲ್ಲ ಅವರನ್ನು ನನಗೆ ಉಳಿಸಿಕೊಳ್ಳಲು ಆಗ್ಲಿಲ್ಲ ಎನ್ನುವ ಕೊರಗು ನನಗೆ ಪದೇ ಪದೇ ಕಾಡುತ್ತಿದೆ. ಅಪ್ಪನನ್ನು ಒಂದು ದಿನ ಬಿಟ್ಟು ಇರಲಿಲ್ಲ ಹಾಗೂ ಅದು ನನ್ನಿಂದ ಸಾಧ್ಯನೂ ಆಗುತ್ತಿರಲಿಲ್ಲ. ಮತ್ತೆ ಹುಟ್ಟಿ ಬನ್ನಿ ಅಪ್ಪ ನಿಮ್ಮ ಪ್ರೀತಿಯ ಮಗಳಾಗಿ ಕಾಯುತ್ತಿರುತ್ತೇನೆ. ಮುಂದಿನ ಜನ್ಮದಲ್ಲಿ ನನ್ನ ಅಪ್ಪನ ಜೊತೆ ಬಾಳುವ ಅವಕಾಶ ಮಾಡಿಕೊಡು ದೇವರೆ ಅಂತ ನಾನು ದೇವರಲ್ಲಿ ಕೇಳಿಕೊಳ್ಳುತ್ತಾ ಇದ್ದೇನೆ.ಇಂತಹ ಘಟನೆ ಯಾರ ಜೀವನದಲ್ಲೂ ನಡೆದಿರಬಾರದು . ಮಿಸ್ ಯೂ ಅಪ್ಪಾ…….. ಲವ್ ಯೂ ಅಪ್ಪಾ…….

ಶ್ವೇತಾ. ಎ.
ಅರಮನೆಗಾಯ
ಗ್ರಾ.ಪಂ.ಉಪಾಧ್ಯಕ್ಷೆ

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.