ಶ್ರೇಯಾ ಮೇರ್ಕಜೆಗೆ ಬ್ರಾಂಡ್ ಅಂಬಾಸಿಡರ್ ಪಟ್ಟ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಬೆಂಗಳೂರು ಕಲಾಸಂಗಮ ಫ್ಯಾಶನ್ ಶೋನಲ್ಲಿ ಗೌರವ

ಎಲಿಮಲೆಯ ಜ್ಞಾನದೀಪ ವಿದ್ಯಾಸಂಸ್ಥೆಯ 9 ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ಮೇರ್ಕಜೆ ಬೆಂಗಳೂರಿನಲ್ಲಿ ಎಸ್‌ಎಸ್ ಕಲಾಸಂಗಮ ನಡೆಸಿದ ಫ್ಯಾಶನ್ ಶೋನಲ್ಲಿ ಭಾಗವಹಿಸಿ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.


ಗುರುಪ್ರಸಾದ್ ಮೇರ್ಕಜೆ ಹಾಗೂ ಪ್ರಮೀಳಾ ಮೇರ್ಕಜೆ ಅವರ ಪುತ್ರಿಯಾಗಿರುವ ಶ್ರೇಯಾ. ಎಂ. ಜಿ. ನೃತ್ಯ ಪಟುವಾಗಿದ್ದು, ೨೫೦ಕಿಂತಲೂ ಹೆಚ್ಚಿನ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಮಂಗಳೂರು, ಬೆಂಗಳೂರು, ಮೈಸೂರು, ಮಡಿಕೇರಿ, ಗೋವಾ ಮೊದಲಾದ ಕಡೆ ಡ್ಯಾನ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.

ಜನಸ್ಪಂದನ ಟ್ರಸ್ಟ್ ಹಾಗೂ ವಾಯ್ಸ್ ಆಫ್ ಆರಾಧನ ನಡೆಸಿದ ಹಲವಾರು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ೨ ತುಳು ಚಲನಚಿತ್ರ, ೧ ಕಿರುಚಿತ್ರದಲ್ಲೂ ನಟಿಸಿದ್ದಾರೆ. ಹಲವಾರು ಆಲ್ಬಮ್ ಸಾಂಗ್ ನಲ್ಲಿ ನಟಿಸಿ ಪ್ರಶಸ್ತಿ ಪಡೆದಿದ್ದಾರೆ.. ಈಗ ನಡೆಯುತ್ತಿರುವ ಝೀ ಕನ್ನಡ ಸೀಸನ್ ೬ನಲ್ಲೂ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ.
ಕಲಾಸಿರಿ ರತ್ನ ಪ್ರಶಸ್ತಿ, ಕರ್ನಾಟಕ ಸೇವಾ ರತ್ನ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಯುವ ರತ್ನ ಅಪ್ಪು ಪ್ರಶಸ್ತಿ ಸೇರಿದಂತೆ ಹಲವಾರು ಕಡೆಗಳಲ್ಲಿ ಸನ್ಮಾನ ಸ್ವೀಕರಿಸಿದ್ದಾರೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.