ಚೆಂಬು, ತೊಡಿಕಾನದ ಶೆಟ್ಯಡ್ಕ, ಕಲ್ಲುಗದ್ದೆ ಪ್ರದೇಶದಲ್ಲಿ ಭೂಕಂಪನ
ಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವನ್ನು ಹಂಚಿಕೊಳ್ಳುತ್ತಿರುವಾಗಲೇ ಮತ್ತೆ ಸಂಜೆಯ ವೇಳೆಗೆ ಭೂಮಿ ಕಂಪಿಸಿದ ಘಟನೆ ವರದಿಯಾಗಿದೆ.
ಚೆಂಬು,ಗೂನಡ್ಕ, ತೊಡಿಕಾನ ಭಾಗದ ಶೆಟ್ಯಡ್ಕ, ಕಲ್ಲುಗದ್ದೆ ಮುಂತಾದ ಕಡೆ ಸುಮಾರು ೪.೪೫ರ ಹೊತ್ತಿಗೆ ಮತ್ತೆ ಭೂಮಿ ಕಂಪಿಸಿದ ಬಗ್ಗೆ ಆ ಭಾಗದ ಜನರು ಹೇಳಿಕೊಂಡಿದ್ದಾರೆ. ಆದರೆ ಆದರ ತೀವ್ರತೆ ಬೆಳಿಗ್ಗಿನಷ್ಟು ಇರಲಿಲ್ಲ ಎಂದು ಹೇಳಿದ್ದಾರೆ.