ಜೈ ಭೀಮ್ ಕಾರ್ಮಿಕರ ಸಂಘಟನೆ ಪಂಜ(ಅಸಂಘಟಿತ ವಲಯ) ಮತ್ತು ಶ್ರೀ ಮಹಮ್ಮಾಯ ಎಂಟರ್ ಪ್ರೈಸಸ್ ಸೌಧಾಮಿನಿ ಪಂಜ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ಪ್ರಯುಕ್ತ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಜೂ.26 ರಂದು ಪಂಜ ಸೌಧಾಮಿನಿ ಸಭಾಭವನದಲ್ಲಿ ಜರುಗಿತು.
ಕೊಲ್ಲಮೊಗ್ರ ಉಪವಲಯ ಅರಣ್ಯಾಧಿಕಾರಿ ರವಿಚಂದ್ರ ಪಡುಬೆಟ್ಟು ಉದ್ಘಾಟಿಸಿ ಶುಭಹಾರೈಸಿದರು.ಕಾರ್ಮಿಕರ ಸಮಿತಿಯ ಅಧ್ಯಕ್ಷ ಸುರೇಶ್ ಅಡ್ಡತೋಡು ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಶ್ರೀಮಹಮ್ಮಾಯ ಎಂಟರ್ ಪ್ರೈಸಸ್ ಮಾಲಕ ಮತ್ತು ಎಸ್ಸಿ/ಎಸ್ಟಿ ಕೈಗಾರಿಕೋದ್ಯಮಗಳ ಸಂಘ ಮಂಗಳೂರು ಇದರ ಉಪಾಧ್ಯಕ್ಷ ಮೋನಪ್ಪ ಸೌಧಾಮಿನಿ, ಸಂಪನ್ಮೂಲ ವ್ಯಕ್ತಿಯಾಗಿ ನೆಲ್ಯಾಡಿ ವಿ.ವಿ ಕಾಲೇಜು ಉಪನ್ಯಾಸಕ ಡಾ.ಸೀತಾರಾಮ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿ ಚನಿಯ ಪಂಜ ಸ್ವಾಗತಿಸಿದರು. ಗಣೇಶ್ ಕಕ್ಯಾನ ವಂದಿಸಿದರು.