ಅಮರ ಸಂಘಟನಾ ಸಮಿತಿ ಇದರ ಆಶ್ರಯದಲ್ಲಿ, ಕಡಬ ತಾಲೂಕಿನ ಸವಣೂರು ಸಮೀಪದ ಮಾಂತೂರು ಶ್ಯಾಮಲಾ ಅವರಿಗೆ ಪುಣ್ಣಚ್ಚಾಪ್ಪಾಡಿ ಗ್ರಾಮದ ಕುಮಾರಮಂಗಲ ಪಂಚಾಯತ್ ನಿವೇಶನದಲ್ಲಿ ದಿನಾಂಕ 2022 ರ ಎ.10 ರಂದು ಸುಮಾರು 2,97,000 ರೂಪಾಯಿಯ ನೂತನ ಗೃಹನಿರ್ಮಾಣ ಮಾಡಿಕೊಡಲಾಗಿತು. ಈ ಒಂದು ಕಾರ್ಯಕ್ರಮ ಕ್ಕೆ, ನಮ್ಮ ಸಂಘದ ಸದಸ್ಯರು, ಗ್ರಾಮದ, ತಾಲೂಕಿನ, ರಾಜ್ಯದ ದಾನಿಗಳು ಸಹಕರಿಸಿದ್ದರು.
ಈ ಮನೆಯ ಮುಂಭಾಗದಲ್ಲಿ ಅನುಕೂಲಕ್ಕಾಗಿ ಜೂ.28 ರಂದು ಸುಮಾರು 17,300 ರೂಪಾಯಿಯ ನ್ನು ದಾನಿಗಳ ಸಹಕಾರ ದೊಂದಿಗೆ ಶೀಟ್ ಹಾಕಿಕೊಡಲಾಯಿತು.
ಈ ಒಂದು ವ್ಯವಸ್ಥೆ ಗೆ ದಾನಿಗಳಾದ ಜಯಪ್ರಕಾಶ್ ದೊಡ್ಡಿಹಿತ್ಲ್, ಪ್ರವೀಣ್ ಕುಲಾಲ್, ಭವಿತಾ ಕಳಂಜ, ಸುಕೇಶ್, ಜಯಪ್ರಕಾಶ್ ಬಿರುಸಾಗು, ಪ್ರಸಾದ್ ಕೆ ಎಚ್, ಲಿಖಿತ್ ಕರಂಗಲಡ್ಕ,ಮಹೇಶ್ ಮೇರ್ಕಜೆ, ದೇವರಾಜ್ ಕಡಪಳ, ಜಯಪ್ರಸಾದ್ ಸಂಕೇಶ, ವೆಂಕಟ್ರಮಣ ಕುಚ್ಚಾಲ, ಹಿತೇಶ್ ನರ್ಕೋಡು, ಪಾರ್ವತಿ ಸುಬ್ಬಯ್ಯ, ಅಶ್ವಿನ್ ರೈ ಶೇಣಿ, ಮಿಥುನ್ ಕೆರೆಗದ್ದೆ, ರಕ್ಷಿತ್ ಉಬರಡ್ಕ, ಸಿಂಚನ ಸಿ. ವಿ, ಪ್ರದರ್ಶನ್ ಕಟ್ಟದಮಜಲು, ನಾರಾಯಣ ರೆಡ್ಡಿ ಆಂಧ್ರಪ್ರದೇಶ, ಲಿಖಿತ್ ಕೊಡ್ತುಗುಳಿ, ಕಾರ್ತಿಕ್ ಬರೆಮೇಲು, ಹರ್ಷಿತ್ ಜಿ ಜೆ ಸಹಕರಿಸಿದರು.
ಜೂ.26 ಮತ್ತು 27ರಂದು ನಡೆದ ಶ್ರಮದಾನ ದಲ್ಲಿ ಸಂಘದ ಅಧ್ಯಕ್ಷರಾದ ರಜನಿಕಾಂತ್ ಉಮ್ಮಡ್ಕ, ಶಶಿಕಾಂತ್ ಮಿತ್ತೂರು, ಕುಸುಮಾಧರ ಮುಕ್ಕೂರು, ಭವಿತಾ ಕಳಂಜ, ರಾಜೀವಿ ಗೋಲ್ಯಾಡಿ,ಪ್ರಶಾಂತ್ ಕುಮಾರ್ ಕುದ್ಮಾರ್ ಸಹಕರಿಸಿದರು.