ಸಂಪಾಜೆಯ ಭೂಕಂಪ ಪೀಡಿತ ಪ್ರದೇಶದ ಮನೆಗಳಿಗೆ ಸಹಾಯಕ ಕಮಿಷನರ್ ಗಿರೀಶ್ ನಂದನ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಇಂಜಿನಿಯರ್ರಿಂದ ವರದಿ ತರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಂಪಾಜೆ ಗ್ರಾಮದ ನಾಗೇಶ್ ಬಾಚಿಗದ್ದೆ, ಸರೋಜ, ರಫೀಕ್, ಅಬೂಸಾಲಿ, ಶಂಕರ ಪ್ರಸಾದ್ ರೈ, ಜನತಾ ಕಾಲೋನಿ, ವಿ ವಿ ಬಾಲನ್, ಹಾಜಿ ಅಬ್ಬಾಸ್ ಗೂನಡ್ಕ, ಮಾರಿಯಮ್ಮ, ಕೃಷ್ಣ ಮಣಿಯಣಿ ಕೈಪಡ್ಕ, ಸಾವಿತ್ರಿ ಕರಿಯಪ್ಪ, ಬಷೀರ್, ದಮಯಂತಿ ಲಕ್ಷ್ಮಣ ಅವರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಅನಿತಾಲಕ್ಷ್ಮಿ, ಕಂದಾಯ ನೀರಿಕ್ಷಕ ಕೊರಗಪ್ಪ ಹೆಗ್ಡೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ, ಗ್ರಾಮ ಕರಣಿಕರಾದ ಮಿಯಾ ಸಾಬ್ ಮುಲ್ಲಾ, ತೆಕ್ಕಿಲ್ ಪ್ರತಿಷ್ಠಾನದ ಟಿ. ಎಮ್. ಶಾಹಿದ್ ತೆಕ್ಕಿಲ್,ಪಂಚಾಯತ್ ಸದಸ್ಯರುಗಳಾದ ಜಗದೀಶ್ ರೈ, ಅಬೂಸಾಲಿ ಪಿ. ಕೆ., ಎಸ್.ಕೆ. ಹನೀಫ್, ವಿಜಯ ಅಲಡ್ಕ, ಸೊಸೈಟಿ ನಿರ್ದೇಶಕರಾದ ಗಣಪತಿ ಭಟ್ ಪಿ. ಎನ್, ಸಜ್ಜನ ಪ್ರತಿಷ್ಠಾನದ ರಹೀಮ್ ಬೀಜದಕಟ್ಟೆ, ಪ್ರಶಾಂತ್ ವಿ. ವಿ. ಉಪಸ್ಥಿತರಿದ್ದರು.