Breaking News

ಜಾಲ್ಸೂರು: ಲಂಚ ಭ್ರಷ್ಟಾಚಾರ ಮುಕ್ತ ಮತ್ತು ಗ್ರಾಮಾಭಿವೃದ್ಧಿಯ ಸಮಾಲೋಚನಾ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಮೂವತ್ತು ಜನರನ್ನೊಳಗೊಂಡ ಗ್ರಾಮಸಮಿತಿ ರಚನೆ

ಜು.14ರಂದು ದ್ವಿತೀಯ ಹಂತದ ಸಭೆ ನಡೆಸಲು ನಿರ್ಧಾರ

ಸುದ್ದಿ ಜನಾಂದೋಲನದ ಲಂಚ ಭ್ರಷ್ಟಾಚಾರ ಮುಕ್ತ ಗ್ರಾಮ ಮತ್ತು ಗ್ರಾಮಾಭಿವೃದ್ಧಿಯ ಪ್ರಥಮ ಸಮಾಲೋಚನಾ ಸಭೆಯು ಜಾಲ್ಸೂರು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜೂ.29ರಂದು ನಡೆಯಿತು.

ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಲಂಚ – ಭ್ರಷ್ಟಾಚಾರ ಮುಕ್ತ ಗ್ರಾಮ ಮತ್ತು ಗ್ರಾಮಾಭಿವೃದ್ಧಿಯ ಕುರಿತು ಮಾತನಾಡಿದರು.
ಸಭೆಯಲ್ಲಿ ಜಾಲ್ಸೂರು ಗ್ರಾಮಸಮಿತಿಯನ್ನು ರಚಿಸಲಾಯಿತು. ಸಂಚಾಲಕರುಗಳಾಗಿ ಗ್ರಾ.ಪಂ. ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಚೆನ್ನಕೇಶವ ಜಾಲ್ಸೂರು, ಗ್ರಾ.ಪಂ. ಸದಸ್ಯೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ರವಿರಾಜ್ ಗಬ್ಬಲಡ್ಕ ಹಾಗೂ ಜಾಲ್ಸೂರು ಬಿ.ಎಂ. ಎಸ್. ಅಟೋರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಗೋಪಾಲ ಕೋನಡ್ಕಪದವು ಅವರನ್ನು ಆಯ್ಕೆ ಮಾಡಲಾಯಿತು.


ಸದಸ್ಯರುಗಳಾಗಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ವಿನೋಬನಗರ, ಎನ್.ಎಂ.‌ಸತೀಶ ಕೆಮನಬಳ್ಳಿ, ಪಿ.ಆರ್. ಸಂದೀಪ್ ಕದಿಕಡ್ಕ, ಶ್ರೀಮತಿ ತಿರುಮಲೇಶ್ವರಿ ಮರಸಂಕ, ಅಬ್ದುಲ್ ಮಜೀದ್ ನಡುವಡ್ಕ, ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು, ಶ್ರೀಮತಿ ಸಂಧ್ಯಾವಾಗ್ಲೆ ಅಡ್ಕಾರು, ವಿಜಯ ಅಡ್ಕಾರು, ಶ್ರೀಮತಿ ಗೀತಾ ಗೋಪಿನಾಥ್ ಬೊಳುಬೈಲು, ಶ್ರೀಮತಿ ಗೀತಾ ಚಂದ್ರಹಾಸ ಅರ್ಭಡ್ಕ, ಮುಜೀಬ್ ಪೈಚಾರು, ಶಿವಪ್ರಸಾದ್ ಕುಕ್ಕಂದೂರು, ಶ್ರೀಮತಿ ಅಂಬಿಕಾ ಕುಕ್ಕಂದೂರು, ಶ್ರೀಮತಿ ದೀಪಾ ಅಜಕಳಮೂಲೆ, ಈಶ್ವರ ನಾಯ್ಕ ಕುಕ್ಕಂದೂರು, ಮಾಜಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಸುಮಂಗಲಿ ನಾಯಕ್ ಕೊಲ್ಯತ್ತಗುಂಡಿ, ಜಾಕೆ ಸದಾನಂದ, ಮುರಳೀಧರನ್ ಕೆಮನಬಳ್ಳಿ, ಹಮೀದ್ ಅಡ್ಕಾರು, ಜಯಂತ ಗೌಡ ಅಡ್ಕಾರು, ಬಾಲಶೇಖರ ಹೊಸಗದ್ದೆ, ಕುಸುಮಾಧರ ಅರ್ಭಡ್ಕ, ಯೋಗೀಶ ಸೋಣಂಗೇರಿ, ರಮೇಶ್ ಗುಂಡ್ಯಡ್ಕ, ಗ್ರಾ.ಪಂ. ಗ್ರಂಥಪಾಲಕಿ ಶ್ರೀಮತಿ ಸುಚಿತ್ರಾ ಬೊಳುಬೈಲು, ಅವರನ್ನೊಳಗೊಂಡಂತೆ ಸುಮಾರು ಮೂವತ್ತು ಜನರನ್ನೊಳಗೊಂಡ ಗ್ರಾಮಸಮಿತಿಯನ್ನು ರಚಿಸಲಾಯಿತು.


ಮುಂದಿನ ಸಭೆಯನ್ನು ಜು.14ರಂದು ನಡೆಸಲಾಗುವುದು ಹಾಗೂ ಆ ಸಭೆಯಲ್ಲಿ ಇನ್ನಷ್ಟು ಗ್ರಾಮಸ್ಥರನ್ನು ಸಮಿತಿಯ ಸದಸ್ಯರುಗಳನ್ನಾಗಿ ನೇಮಿಸಲಾಗುವುದು ಹಾಗೂ ಗ್ರಾಮದ ಅಭಿವೃದ್ಧಿ ಮತ್ತು ಬೇಡಿಕೆಗಳನ್ನು ಪಟ್ಟಿಮಾಡಲಾಗುವುದು ಎಂದು ತೀರ್ಮಾನಿಸಲಾಯಿತು. ಸುದ್ದಿ ವರದಿಗಾರ ವಿನಯ್ ಜಾಲ್ಸೂರು ಸ್ವಾಗತಿಸಿ, ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.