ಆಲೆಟ್ಟಿ ಗ್ರಾಮದ ರಂಗತ್ತಮಲೆ ನಿವಾಸಿ ಚಂದ್ರಶೇಖರ ರವರು ಜೂ.28 ರಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 38 ವರ್ಷ ವಯಸ್ಸಾಗಿತ್ತು.
ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಪರೀತ ವಾಂತಿ ಭೇದಿ ಬಾಧಿಸಿಕೊಂಡಿದ್ದು ರಾತ್ರಿ ಸುಮಾರು 10.00 ಗಂಟೆಯ ಆಸ್ಪತ್ರೆಯಲ್ಲಿ ವೇಳೆಗೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ತಂದೆ ಬುದ್ಧ ನಾಯ್ಕ ರಂಗತ್ತಮಲೆ, ತಾಯಿ ಶ್ರೀಮತಿ ಜಯಂತಿ, ಪತ್ನಿ ಶ್ರೀಮತಿ ಗೀತಾ, ಎರಡು ವರ್ಷ ಮತ್ತು 4 ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳು ಹಾಗೂ ಸಹೋದರ ,ಸಹೋದರಿಯರನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.