ತೋಡಾಗಿ ಮಾರ್ಪಟ್ಟಿರುವ ರಾಷ್ಟ್ರೀಯ ಹೆದ್ದಾರಿ
ಜಾಲ್ಸೂರು ಗ್ರಾಮದ ಬೊಳುಬೈಲಿನಲ್ಲಿ ಸಮರ್ಪಕವಾದ ಚರಂಡಿ ಇಲ್ಲದ ಕಾರಣದಿಂದಾಗಿ ಮಳೆನೀರು ರಾಷ್ಟ್ರೀಯ ಹೆದ್ದಾರಿಯಲ್ಲೇ ತೋಡಿನಂತೆ ಹರಿಯುತ್ತಿದ್ದು, ಜನಸಾಮಾನ್ಯರಿಗೆ ಸಮಸ್ಯೆಯನ್ನುಂಟು ಮಾಡಿದೆ.
ಜೂ.29ರಂದು ಸುರಿದ ಬಾರೀ ಮಳೆಗೆ ನೀರು ಹರಿದು ಹೋಗಲು ಸಮರ್ಪಕವಾಗಿ ಚರಂಡಿ ಇಲ್ಲದ ಕಾರಣದಿಂದ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಇದರಿಂದ ವಾಹನ ಸವಾರರು, ದ್ವಿಚಕ್ರ ಸವಾರರು ಹಾಗೂ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರಿಗೆ ತೀವ್ರ ತೊಂದರೆಯನ್ನುಂಟು ಮಾಡಿದೆ. ಸಂಬಂಧಪಟ್ಟವರು ಇದರತ್ತ ಗಮನಹರಿಸಬೇಕಾಗಿದೆ.