ಶಾಲಾ ಕಟ್ಟಡದ ಗೋಡೆ ಕುಸಿಯುವ ಭೀತಿ
ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಸುಳ್ಯ ಜಟ್ಟಿಪಳ್ಳ ಸರ್ಕಾರಿ ಶಾಲೆಯ ಪಕ್ಕಾಸು ಮುರಿದು ಕೆಲವು ಹಂಚುಗಳು ಹುಡಿಯಾದ ಘಟನೆ ಸಂಭವಿಸಿದೆ.
ಘಟನೆ ರಾತ್ರಿ ಸಂಭವಿಸಿದ್ದರಿಂದ ಯಾವುದೇ ಜೀವ ಹಾನಿಯಾಗಿಲ್ಲ.
ಶಾಲಾ ಸಮಯದ ಸಂದರ್ಭದಲ್ಲಿ ಈ ಅನಾಹುತ ಉಂಟಾಗಿದ್ದರೆ ತುಂಬಾ ಅನಾಹುತಗಳು ಉಂಟಾಗುತ್ತಿತ್ತು.
ಪಕ್ಕಾಸು ಮುರಿದು ಬಿದ್ದಿರುವ ಭಾಗದಲ್ಲಿ ಗೋಡೆಯ ಮೇಲ್ಭಾಗ ಬಿರುಕು ಬಿಟ್ಟಿದ್ದು, ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ.
ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ.