Breaking News

ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡ ಬಸ್ಸು ಸಂಚಾರವನ್ನು ಪುನರಾರಂಭಿಸಲು ಎ ಎ ಪಿ ವತಿಯಿಂದ ತಹಶೀಲ್ದಾರರಿಗೆ ಮನವಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕಳೆದ ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿರುವ ಮಡಪ್ಪಾಡಿ, ಉಬರಡ್ಕ, ಸುಳ್ಯ ಮಾರ್ಗವಾಗಿ ಚಲಿಸುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಬಸ್ಸಿನ ಸಂಚಾರವನ್ನು ಪುನಗಾರಂಬಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಸುಳ್ಯದ ಮುಖಂಡರು ಇಂದು ತಹಶೀಲ್ದಾರ್ ಕು.ಅನಿತಾ ಲಕ್ಷ್ಮಿ ರವರಿಗೆ ಮನವಿ ನೀಡಿದರು.
ಈ ಭಾಗದ ಕೃಷಿಕರು,ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರು ದೈನಂದಿನ ಚಟುವಟಿಕೆಗಳಿಗೆ ಸುಳ್ಯ ನಗರವನ್ನು ಅವಲಂಬಿಸಿದ್ದು ಬಸ್ಸು ಸಂಚಾರವಿಲ್ಲದ ಕಾರಣ ನಾನ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಈ ಮಾರ್ಗದ ಬಸ್ಸಂಚಾರವನ್ನು ಶೀಘ್ರವಾಗಿ ಆರಂಭಿಸುವಂತೆ ಆಮ್ ಆದ್ಮಿ ಪಕ್ಷ ಸುಳ್ಯ ವಿಧಾನಸಭಾ ಕ್ಷೇತ್ರದ ವತಿಯಿಂದ ಆಗ್ರಹಿಸುತ್ತಿದ್ದೇವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆ ಅಡಿಯಲ್ಲಿ ನಿರಾಶ್ರಿತರಿಗೆ ನೀಡಲ್ಪಡುವ ನಿವೇಶನಗಳಿಗೆ ಫಲಾನುಭವಿಗಳು ಅರ್ಜಿ ಹಾಕಿ ಹನ್ನೆರಡು ವರ್ಷ ಕಳೆದರೂ ಇನ್ನೂ ಕೂಡ ವಸತಿ ಮಂಜೂರಾಗದ ಕುರಿತು, ಹಾಗೂ ಇದನ್ನು ಶೀಘ್ರವಾಗಿ ಕ್ರಮಕೈಗೊಂಡು ಫಲಾನುಭವಿಗಳಿಗೆ ವಸತಿ ಮಂಜೂರು ಮಾಡುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಸಹಯೋಗದೊಂದಿಗೆ ಫಲಾನುಭವಿಗಳು ತಹಶೀಲ್ದಾರರಿಗೆ ಮನವಿ ಯನ್ನು ನೀಡಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಶೀದ್ ಜಟ್ಟಿಪಳ್ಳ, ನಗರ ಅಧ್ಯಕ್ಷರು ರಾಮಕೃಷ್ಣ ಬೀರಮಂಗಲ, ಕಾರ್ಯದರ್ಶಿ ಕಲಂದರ್, ಪಕ್ಷದ ಮುಖಂಡರುಗಳಾದ ಡಿ ಎಂ ಶಾರಿಕ್, ಸುಮಯ್ಯ, ಕಲಂದರ್ ಎಲಿಮಲೆ, ಗಣೇಶ್ ಪ್ರಸಾದ್, ಪ್ರಕಾಶ್ ಜಟ್ಟಿಪಳ್ಳ, ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.